ಸುದ್ದಿ9 ಬಂಟ್ವಾಳ; ಈ ಭಾವ ಚಿತ್ರದಲ್ಲಿ ಕಾಣುವ ಹದಿಹರೆಯದ ಸ್ಪುರದ್ರೂಪಿ ಯುವಕ ಮುಂಬಯಿಯ ಹೊಟೇಲೊಂದರಲ್ಲಿ ಕಾರ್ಮಿಕನಾಗಿದ್ದುಕೊಂಡು ತನ್ನ ಕುಟುಂಬಕ್ಕೆ ಆಸರೆಯಾಗಿದ್ದ. ಈಗ ಈತ ಕಾಯಿಲೆಯೊಂದರಿಂದ ಬಳಲಿ ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸುತ್ತಿದ್ದಾನೆ.
ಈತನ ದೇಹದಲ್ಲಿರುವ ಬಿಳಿ,ಕೆಂಪು ರಕ್ತ ಕಣಗಳನ್ನು ಕೊಲ್ಲುವ ಅಪರೂಪದ ಕಾಯಿಲೆ (ಹೆಮೋಫಾಗೋಸಿಸ್ಪೋಸಿಸ್)ಯಿಂದ ಬಳಲುತ್ತಿದ್ದು ಆರ್ಥಿಕ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾನೆ.
ಮಂಗಳೂರು ತಾಲೂಕಿನ ಪೆರ್ಮಂಕಿ ಉಳಾಯಿಬೆಟ್ಟು ನಿವಾಸಿಯಾದ ರಾಮಪೂಜಾರಿಯವರ ಪುತ್ರ ಲೋಕೇಶ್ 34, ಈ ಅಪರೂಪದ ಕಾಯಿಲೆಗೆ ತುತ್ತಾಗಿದ್ದು ಸದ್ಯಕ್ಕೆ ಕೇರಳ ರಾಜ್ಯದ ಕೊಲ್ಲಂನಲ್ಲಿರುವ ಅಮೃತಾ ಇನ್ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ದಾಖಲಾಗಿದ್ದು, ಅಲ್ಲಿನ ವೈದ್ಯರಾದ ಡಾ.ನೀರಜ್ ಸಿದ್ಧಾರ್ಥನ್ ಎಂಬವರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಗಾಗಲೆ ತನ್ನ ಕುಟುಂಬಿಕರು,ಸ್ನೇಹಿತರ ನೆರವು ಸಾಲದ ರೂಪದಲ್ಲಿ ಪಡೆದ ಸುಮಾರು 8ಲಕ್ಷ ರೂಪಾಯಿಯನ್ನು ಚಿಕಿತ್ಸೆಗೆ ಖರ್ಚು ಮಾಡಿರುವ ಲೋಕೇಶ್ ಇನ್ನೂ ಕೂಡಾ ಸುಮಾರು30ಲಕ್ಷಕ್ಕೂ ಅಧಿಕ ರೂಪಾಯಿಯ ಅಗತ್ಯವಿದೆಯೆಂದು ವೈದ್ಯರು ತಿಳಿಸಿದ್ದಾರೆ.
ಅತ್ಯಂತ ಬಡ ಕುಟುಂಬವಾಗಿರುವ ಲೋಕೇಶ್ ಅವರು ಆರ್ಥಿಕವಾಗಿ ಅಶಕ್ತರಾಗಿದ್ದಾರೆ. ಹಾಗೆಯೇ ತನ್ನ ಚಿಕಿತ್ಸೆಗೆ ಈಗಾಗಲೆ ಮಾಡಿರುವ ಸಾಲ ಮೈಮೇಲಿದ್ದು ಇನ್ನಷ್ಟು ಹಣ ಹೊಂದಿಸಲು ಅಸಮರ್ಥರಾಗಿದ್ದಾರೆ.ಹಾಗಾಗಿ ಸಹೃದಯಿ ದಾನಿಗಳಿಂದ ಆರ್ಥಿಕ ಸಹಕಾರವನ್ನು ಅವರು ಕೋರಿದ್ದಾರೆ.
ದಾನಿಗಳು ಲೋಕೇಶ್ರವರ ಮಂಗಳೂರು ವಾಮಂಜೂರು ಶಾಖೆಯ ಕಾರ್ಪೋರೇಷನ್ ಬ್ಯಾಂಕಿನ ಎಸ್ಬಿ ಖಾತೆ ಸಂಖ್ಯೆ 079600101011490 IFSC ಕೋಡ್ CORP 0000796 ಈ ಖಾತೆಗೆ ನೆರವನ್ನು ನೀಡುವಂತೆ ಅವರು ವಿನಂತಿಸಿದ್ದಾರೆ.

