ಬಂಟ್ವಾಳ : ತಾಲೂಕು ಅರಳ ಗ್ರಾಮದ ಎರ್ಮಾಳ ಪದವು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಪೋಷಕರ ಸಭೆ ಹಾಗೂ ಉಚಿತ ಪುಸ್ತಕ ವಿತರಣ ಕಾರ್ಯಕ್ರಮ ಮತ್ತು ವನ ಮಹೋತ್ಸವ ಜರಗಿತು.

ermalapadav
ರಾಯಿ ಗ್ರಾ.ಪಂ.ಸದಸ್ಯ ಹಿದಾಯತುಲ್ಲಾ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೊರ್ನಾಡ್ ಕೆನರಾ ಬ್ಯಾಂಕ್ ಮೆನೇಜರ್ ರಮೇಶ್ ನಾಯ್ಕ್ , ಆಫೀಸರ್ಸ್ ಅಸೋಸಿಯೇಷನ್ ಹಾಗೂ ಗ್ರಾ.ಪಂ.ಸದಸ್ಯ ಹಿದಾಯತುಲ್ಲಾ ಅವರ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಲೇಖನ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. ರಾಯಿ ಗ್ರಾ.ಪಂ.ಸದಸ್ಯೆ ಚಂದ್ರಾವತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಗಾಯತ್ರಿ ಭಟ್ ಮತ್ತು ಸದಸ್ಯರು ಹಾಗೂ ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಫ್ಲೋರಿನ್ ಕವರ್ಲೊ ಸ್ವಾಗತಿಸಿದರು. ಶಾಲಿನಿ ಡಿಸೋಜ ವಂದಿಸಿದರು. ಶಿಕ್ಷಕ ಮಹಾಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *