31870538_1797646576945596_1200848718245396480_n

ಮಂಗಳೂರು: ಮುನೀರ್ ಕಾಟಿಪಳ್ಳ ಅವರು ಮುಸ್ಲಿಂ ಸಮುದಾಯದ ಹೆಸರಿನಲ್ಲಿ ಟಿಕೆಟ್ ಗಿಟ್ಟಿಸಿ ಈ ಮೂಲಕ ಕ್ರಿಮಿನಲ್ ಗಳ ತಂಡ ಕಟ್ಟಿಕೊಂಡು ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಲೇವಡಿ ಮಾಡಿದ್ದಾರೆ.

ಪಂಜಿಮೊಗರು ಚುನಾವಣಾ ಪ್ರಚಾರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ತನ್ನ ವ್ಯಾಪಾರಿ ಬುದ್ಧಿಯಿಂದ ಐದು ವರ್ಷಗಳ ಕಾಲ ಬಿಜೆಪಿ ಮತ್ತು ಸಂಘ ಪರಿವಾರದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಆಡಳಿತ ನಡೆಸಿದ ಶಾಸಕ ಮೊಯ್ದಿನ್ ಬಾವಾ ಕೋಮುಶಕ್ತಿಗಳನ್ನು ಸೋಲಿಸಲಿಕ್ಕಾಗಿ ಜಾತ್ಯತೀತರು ಮತ್ತು ಮುಸಲ್ಮಾನರು ಐಕ್ಯತೆಯಿಂದ ಕಾಂಗ್ರೆಸ್ಸಿಗೆ ಮತ ಚಲಾಯಿಸಬೇಕು ಎಂದು ಕರೆ ನೀಡಿದರು.

ಬಾವಾರಿಂದ ಕೋಮುವಾದದ ವಿರುದ್ಧ ಹೋರಾಟವೂ ಸಾಧ್ಯವಿಲ್ಲ, ಅಲ್ಪಸಂಖ್ಯಾತ ಮುಸ್ಲಿಮರ ಹಿತರಕ್ಷಣೆಯೂ ಸಾಧ್ಯವಿಲ್ಲ. ಮೌಲ್ವಿ ಹಂತಕರ ಬಹಿರಂಗ ಸೇರ್ಪಡೆಯೇ ಮೊಯ್ದಿನ್ ಬಾವರ ಕೋಮು ಮತ್ತು ವ್ಯಾಪಾರಿ ರಾಜಕಾರಣದ ನಿರ್ಲಜ್ಜತೆಯನ್ನು ಎತ್ತಿ ತೋರಿಸುತ್ತದೆ. ಈ ಮೂಲಕ ಮೊಯ್ದಿನ್ ಬಾವಾರ ನಿಜ ಬಣ್ಣ ಎಲ್ಲರಿಗೂ ತಿಳಿದಂತಾಗಿದೆ ಎಂದು ಕಿಡಿಕಾರಿದರು.

By suddi9

Leave a Reply

Your email address will not be published. Required fields are marked *