download

ಚಾಮರಾಜನಗರ: ಮೂಢನಂಬಿಕೆಗೆ ಜೋತು ಬಿದ್ದು ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬಾರದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಕ್ಕೆ ಪ್ರಧಾನಿ ಆಗಿರುವುದು ನಾಲಾಯಕ್ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ಚಾಮರಾಜನಗರಕ್ಕೆ ಬಾರದೆ ಇರುವ ಬಗ್ಗೆ ನರೇಂದ್ರ ಮೋದಿ ಅವರ ವಿರುದ್ದ ಉನ್ನತ ಮಟ್ಟದ ತನಿಖೆ ಆಗಬೇಕು. ಇವರು ಸಂವಿಧಾನಕ್ಕೆ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ಅಖಂಡ ಭಾರತ ದೇಶದ ಜನತೆ ಮುಂದೆ ಬಹಿರಂಗ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಇವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ವಾಟಾಳ್ ಎಚ್ಚರಿಸಿದ್ದಾರೆ.

ಮತಯಾಚನೆ ವೇಳೆ ದಳಪತಿ ವೀರತಪ್ಪ, ನಾಗರಾಜಮೂರ್ತಿ, ಸಿ.ಜಿ.ನಾಗೇಶ್, ಸುರೇಶ್ ನಾಗ್, ಡೈರಿ ಮಹದೇವಪ್ಪ, ಚಿನ್ನನಾಯಕ, ವರದರಾಜು, ಶಿವಕುಮಾರ್, ರಾಜು, ಪ್ರಕಾಶ್, ಕುಮಾರ್, ಬಸವಣ್ಣ, ಕೆಂಪಣ್ಣ, ನಾರಾಯಣಸ್ವಾಮಿ, ನಾರಾಯಣ, ಶಿವಣ್ಣ, ರಾಜೇಂದ್ರ, ಸುರೇಶ್, ಬೆಳ್ಳನಾಯಕ, ಮಹದೇವನಾಯಕ, ಶಿವಲಿಂಗಮೂರ್ತಿ, ವರದನಾಯಕ, ಗೋವಿಂದ, ಹೇಮಂತ್, ಚಿಕ್ಕನಿಂಗಶೆಟ್ಟಿ, ವೀರಭದ್ರಶೆಟ್ಟಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *