ಮಂಗಳೂರು: ನಗರದ ಕಸ್ಬಾ ಬೆಂಗರೆಯಲ್ಲಿ ಮೂವರು ಯುವಕರ ಮೇಲೆ ತಂಡವೊಂದು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬೆಂಗ್ರೆ ಆಸುಪಾಸಿನ ನಿವಾಸಿಗಳಾದ ಸಂಗಾರ್ ಸುವರ್ಣ (20), ಶಿವರಾಜ್ ಯಾನೆ ವಿಜಿತ್ (24), ತುಷಾರ್ ಆರ್. ಪುತ್ರನ್ (20) ಬಂಧಿತ ಆರೋಪಿಗಳು ದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಇನ್ನೂ ಮೂವರು ಪಾಲ್ಗೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಎ.8ರಂದು ಕಸ್ಬಾ ಬೆಂಗರೆಯ ಮೈದಾನದಲ್ಲಿ ಕುಳಿತಿದ್ದ ಸ್ಥಳೀಯ ಯುವಕರಾದ ಅನ್ವೀಝ್, ಮುಹಮ್ಮದ್ ಸಿರಾಜ್ ಮತ್ತು ಮುಹಮ್ಮದ್ ಇಜಾಝ್ ಎಂಬವರು ಮೊಬೈಲ್ ವೀಕ್ಷಿಸುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಆಗಮಿಸಿದ 6 ಮಂದಿ ಹಲ್ಲೆ ಮಾಡಿದ್ದರು.

