ಬೆಂಗಳೂರು: ಗೌರಿ ಲಂಕೇಶ್ ಹತ್ಯೆಯ ಆರೋಪಿ ಬಂಧಿತನಾಗಿರುವ ಕೆ.ಟಿ.ನವೀನ್ ಕುಮಾರ್ ನನ್ನು ಸದ್ಯದಲ್ಲಿಯೇ ಮಂಪರುಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೇಸಿನ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ಗುಜರಾತ್ ನ ವಿಧಿವಿಜ್ಞಾನಪ್ರಯೋಗಾಲಯ ಮಂಪರು ಪರೀಕ್ಷೆಗೆ ಒಳಪಡಿಸಲು ಸಮಯಾವಕಾಶ ನೀಡಿದೆ.
ನವೀನ್ ಗೆ ಮಂಪರು ಪರೀಕ್ಷೆಗೊಳಪಡಿಸಲು ಸಮಯ ಕೋರಿ ವಿಶೇಷ ತನಿಖಾ ತಂಡ ಗುಜರಾತ್ ನ ವಿಧಿವಿಜ್ಞಾನಪ್ರಯೋಗಾಲಯಕ್ಕೆ ಪತ್ರ ಬರೆದಿತ್ತು. ವಿಧಿವಿಜ್ಞಾನ ಪ್ರಯೋಗಾಲಯ ನಮ್ಮ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದು ಏಪ್ರಿಲ್ 15ರಿಂದ30ರೊಳಗೆ ಯಾವಾಗಲಾದರೂ ಆರೋಪಿಯನ್ನು ಕರೆತರಬಹುದು ಎಂದು ಪ್ರತಿಕ್ರಿಯೆ ಸಿಕ್ಕಿದೆ. ನವೀನ್ ನನ್ನು ಸದ್ಯದಲ್ಲಿಯೇಗುಜರಾತ್ ಗೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೀನ್ ಕುಮಾರ್ ತನಿಖೆಗೆ ಸಹಕರಿಸದಿರುವುದರಿಂದ ಮತ್ತು ತನಿಖಾ ತಂಡದ ಜೊತೆ ಕೆಲವು ರಹಸ್ಯಗಳನ್ನು ಮರೆಮಾಚಲುಪ್ರಯತ್ನಿಸುತ್ತಿರುವುದರಿಂದ ವಿಶೇಷ ತನಿಖಾ ತಂಡ ಮಂಪರು ಪರೀಕ್ಷೆ ನಡೆಸಲು ನಿರ್ಧರಿಸಿದೆ. ಕಳೆದ ಮಾರ್ಚ್ 12ರಂದುನಗರದ ಮೂರನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆರೋಪಿಯನ್ನು ಮಂಪರು ಪರೀಕ್ಷೆನಡೆಸಲು ಅನುಮತಿ ನೀಡಿತ್ತು.