ಮಂಗಳೂರು: ಉರ್ವ ಚಿಲಿಂಬಿಯ ಅಕ್ಷಯ ಫೈನಾನ್ಸ್ ಮಾಲಕ ಶೈಲೇಶ್ ತನ್ನ ಪತ್ನಿ-ಮಗಳಿಗೆ ವಿಷವುಣಿಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಹೊಗೆಬೈಲು ನಿವಾಸಿ ಉದಯ(29) ಬಂಧಿತ ಆರೋಪಿ.
ಈತ ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿದ್ದ ಸಂದರ್ಭದಲ್ಲಿ ಬಂಧಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಅನಿಲ್ ಕಳೆದ ಶನಿವಾರವೇ ನ್ಯಾಯಾಲಯಕ್ಕೆ ಶರಣಾಗಿದ್ದ.

ಶೈಲೇಶ್ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ಉದಯ, ಹರೀಶ್, ಹಾಗೂ ವಿನಯ್ ಹೆಸರನ್ನು ಪ್ರಸ್ತಾಪಿಸಿದ್ದರು. ಅದರಂತೆ ಆರೋಪಿಗಳ ವಿರುದ್ಧ ಆತ್ಮಹತ್ಯೆ ಮಾಡಿಸಲು ದುಷ್ಪೇರಣೆ ನೀಡಿದ ಆರೋಪದನ್ವಯ ಸೆಕ್ಷನ್ 306 ಪ್ರಕಾರ ಉರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
