Image result for ut khader

ಮಂಗಳೂರು: ಮೇಯರ್ ಆಯ್ಕೆ ಸಂಬಂಧ ನಮ್ಮಲ್ಲಿ ಯಾವುದೇ ಮನಸ್ತಾಪ ಇಲ್ಲ ಎಂದು ಸಚಿವ ಯು. ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ.

ಶನಿವಾರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ಪಕ್ಷದ ವರಿಷ್ಠ ನಾಯಕರೊಂದಿಗೆ ಚರ್ಚೆ ಮಾಡಿ ಎಲ್ಲರ ತೀರ್ಮಾನವನ್ನು ತೆಗೆದುಕೊಂಡು ಭಾಸ್ಕರ್ ಮೊಯ್ಲಿಯವರನ್ನು ಅಂತಿಮಗೊಳಿಸಿದ್ದು, ಇದರಿಂದ ಯಾರಿಗೂ ಬೇಸರ ಆಗಿಲ್ಲ ಎಂದು ತಿಳಿಸಿದರು.

ಈ ಬಾರಿ ಸಹಜವಾಗಿಯೇ ಮೇಯರ್ ಆಕಾಂಕ್ಷಿಗಳು ಹೆಚ್ಚಿದ್ದರು. ಎಲ್ಲರೂ ತಮಗೆ ಈ ಬಾರಿ ಅವಕಾಶ ಕೇಳಿದ್ದು, ಸಹಜ. ಹಾಗಂತ ಎಲ್ಲರಿಗೂ ಕೊಡಲಿಕ್ಕೆ ಆಗುವುದಿಲ್ಲ ಎಂದರು.

 

By Suddi9

Leave a Reply

Your email address will not be published. Required fields are marked *