ತುಮಕೂರು: ಖಾಸಗಿ ಬಸ್ ಹಾಗೂ ಆಟೊ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಆಟೊದಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಓರ್ವ ಗಂಭೀರ ಗಾಯಗೊಂಡ ದಾರುಣ ಘಟನೆ ನಗರದ ಹೊರವಲಯದಲ್ಲಿರುವ ಬೆಂಳಗುಂಬದಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಹನಮುಂತಪುರದ ನಿವಾಸಿಗಳಾದ ಮಾರುತಿ, ದೀಪು ಹಾಗೂ ನಝರಾಬಾದ್ ನಿವಾಸಿ ಶಬ್ಬಾಸ್ ಎಂದು ಗುರುತಿಸಲಾಗಿದೆ.
ಮಾರುತಿ ಸೇರಿ ನಾಲ್ವರು ಆಟೊದಲ್ಲಿ ದೇವರಾಯನದುರ್ಗ ನಗರಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಬೆಳಗುಂಬದ ಕೆಂಪೇಗೌಡ ಕಾಲೇಜಿನ ತಿರುವಿನ ಬಳಿ ಖಾಸಗಿ ಬಸ್ಸೊಂದು ಊರ್ಡಿಗೆರೆ ಚಲಿಸುತ್ತಿದ್ದ ಸಂದರ್ಭ ಮುಖಾಮುಖಿ ಢಿಕ್ಕಿ ಹೊಡೆದಿದ್ದು, ಪರಿಣಾಮ ಮೂವರು ಸ್ಥಳದಲ್ಲಿ ಮೃತಪಟ್ಟು ಓರ್ವ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

