ಬಂಟ್ವಾಳ: ಕಕ್ಯಪದವು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಫೆ.14ರಿಂದ ಆರಂಭಗೊಂಡ ಶ್ರೀ ಬ್ರಹ್ಮ ಬೈದರ್ಕಳ ಜಾತ್ರೆಯು ಫೆ.16ರಂದು ಸಂಪನ್ನಗೊಂಡಿತು.

ಗುರುವಾರ ಗ್ರಾಮ ಸಂಕ್ರಾಂತಿ ಸೇವೆ, ಮಧ್ಯಾಹ್ನ ತಾಳಮದ್ದಲೆ, ರಾತ್ರಿ ಧಾರ್ಮಿಕ ಸಭೆ, ಬ್ರಹ್ಮಬೈದೆರ್ಗಳು ಗರಡಿ ಇಳಿಯುವುದು, ಶ್ರೀ ಬ್ರಹ್ಮ ಬೈದರ್ಕಳ ಜಾತ್ರೆ, ಸುಡು ಮದ್ದು ಪ್ರದರ್ಶನ, ಮಾಣಿಬಾಲೆ ನೇಮ ನಡೆಯಿತು. ಶುಕ್ರವಾರ ಕಲಶ, ಸ್ಥಳಶುದ್ದಿ, ಧ್ವಜಾವರೋಹಣ ನಡೆಯಿತು.

ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ, ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು, ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜಶೇಖರ ಕೋಟ್ಯಾನ್, ಜಿ.ಪಂ. ಸದಸ್ಯರಾದ ಬಿ. ಪದ್ಮಶೇಖರ ಜೈನ್, ಚಂದ್ರಪ್ರಕಾಶ್‍ಶೆಟ್ಟಿ, ಪ್ರಮುಖರಾದ ರೋಹಿನಾಥ್ ಪಾದೆ, ಹರೀಶ್ ಸಿದ್ದಕಟ್ಟೆ, ನಿತ್ಯಾನಂದ ಕೆಂತಲೆ, ರವಿ ಪೂಜಾರಿ ಚಿಲಿಂಬಿ, ಜಯಂತ ನಡುಬೈಲ್, ಬಾಬು ಪೂಜಾರಿ ಕೋಂಗುಜೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಉತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್‍ಬಿತ್ತ , ಎ.ಚೆನ್ನಪ್ಪ ಸಾಲಿಯಾನ್, ಸಮಿತಿ ಪದಾ„ಕಾರಿಗಳಾದ ಚಂದ್ರಶೇಖರ ಕೆ., ವಾಸುದೇವ ಮಯ್ಯ, ಬಿ. ಶ್ರೀಧರ ಆಚಾರ್, ಚಿದಾನಂದ ರೈ ಕಕ್ಯ, ಸದಾನಂದ ಗೌಡ, ಚೇತನ್ ಎಚ್., ಜಯಾನಂದ ಪೂಜಾರಿ, ಪರಮೇಶ್ವರ ಜಿ., ರಾಮಯ್ಯ ಭಂಡಾರಿ, ಗುರುಪ್ರಕಾಶ್, ರಾಜೀವ ಕೆ.,ರಾಜೇಂದ್ರ ಟಿ., ಸುಂದರ ದೇವಾಡಿಗ, ವಸಂತ, ನವೀನ ಶೆಟ್ಟಿ, ಪ್ರದೀಪ್ ಕುಮಾರ್, ಸನತ್ ಕುಮಾರ್, ತಾರನಾಥ ಶೆಟ್ಟಿ, ಬಾಬು ಗಿಳಿಂಗಾಜೆ, ಸಂಜೀವ ಗೌಡ ಅಗ್ಪಲ ಮತ್ತಿತರರು ಉಪಸ್ಥಿತರಿದ್ದರು. ಮತ್ತಿತರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
