ಮಂಗಳೂರು: ರಾಜಕಾರಣಿಗಳು ರಾಜ್ಯದ ಪ್ರಗತಿ, ಅಭಿವೃದ್ದಿ ಕಾರ್ಯದತ್ತ ಚಿಂತಿಸಿದ್ದರೆ ಒಳ್ಳೆಯದು ಎಂದು ಬಹುಭಾಷಾನಟ, ನಿರ್ದೇಶಕ ಪ್ರಕಾಶ್ ರೈ ಟ್ವಿಟರ್ ನಲ್ಲಿ ಕರೆ ನೀಡಿದ್ದಾರೆ.
ಬುಧವಾರ ತನ್ನ ಟ್ಟಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, “ಕಾಂಗ್ರೆಸ್ ಮುಖಂಡರು ಹೇಳುತ್ತಾರೆ ನಾನು ಅಲ್ಲಾಹುವಿನ ಕೃಪೆಯಿಂದ ಗೆದ್ದೆ, ಇನ್ನೊಂದೆಡೆ ಬಿಜೆಪಿಯ ರಾಜಕಾರಣಿಯೊಬ್ಬರು ಮುಂದಿನ ಚುನಾವಣೆ ಅಲ್ಲಾಹು ಮತ್ತು ಶ್ರೀರಾಮನ ಮದ್ಯೆ ಎಂದು . ರಾಜಕಾರಣಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಾ ಭಗವಂತನನ್ನು ಹರಾಜು ಹಾಕುವ ಬದಲು ರಾಜ್ಯದ ಪ್ರಗತಿ, ಅಭಿವೃದ್ಧಿ ಕಾರ್ಯದತ್ತ ಚಿಂತಿಸಿದ್ದರೆ ಒಳ್ಳೆಯದು” ಎಂದು ತಿಳಿಸಿದ್ದಾರೆ.
ತಾಲೂಕಿನ ಬಂಟ್ವಾಳದಲ್ಲಿ ಜ.23 ರಂದು ನಡೆದ ಪರಿವರ್ತನಾ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸುನಿಲ್ ಕುಮಾರ್, ಬಂಟ್ವಾಳದಲ್ಲಿ ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ನಡುವೆ ಚುನಾವಣೆ ನಡಿತಾ ಇಲ್ಲ ಬದಲಾಗಿ ರಾಮ ವರ್ಸಸ್ ಅಲ್ಲಾಹುವಿನ ನಡುವೆ ಚುನಾವಣೆ ನಡಿತಾ ಇದೆ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ ಈ ರೀತಿ ಟ್ವೀಟ್ ಮಾಡಿದ್ದಾರೆ.

