ಮಂಗಳೂರು: ನಗರದ ಚೌಕಿ ಎಂಬಲ್ಲಿ ಡಿ.3ರಂದು ತಡರಾತ್ರಿ ದುಷ್ಕರ್ಮಿಗಳಿಂದ ತೀವ್ರ ಹಲ್ಲೆಗೊಳಗಾದ ಬಶೀರ್ ರಿಗೆ ಚಿಕಿತ್ಸೆ ಫಲಕಾರಿಯಾಗದೇ ರವಿವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಡಿ.3ರಂದು ನಗರದ ಕಾಟಿಪಳ್ಳದಲ್ಲಿ ನಡೆದ ದೀಪಕ್ ಎಂಬಾತ ಹತ್ಯೆಯಿಂದ ಉದ್ರಿಕ್ತ ದುಷ್ಕರ್ಮಿಗಳ ಗುಂಪೊಂದು ಬಶೀರ್ ಮೇಲೆ 17ಬಾರಿ ತಲವಾರಿನಿಂದ ಹಲ್ಲೆ ಗೈಯುವ ಮೂಲಕ ಕೊಲೆ ಯತ್ನ ನಡೆಸಿದ್ದರು. ಇದರಿಂದ ಬಶೀರ್ ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಬಳಿಕ ಸ್ಥಳೀಯರು ರಕ್ತದ ಮಡುವಿನಲ್ಲಿದ್ದ ಬಶೀರ್ ಅವರನ್ನು
ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಬಶೀರ್ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ದುಷ್ಕರ್ಮಿಗಳ ಹಲ್ಲೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಬಶೀರ್ ಅವರು ಗುಣಮುಖರಾಗಲು ಬಶೀರ್ ಪತ್ನಿ ಕುಲ್ಸುಮ್, ಮಕ್ಕಳಾದ ಇಮ್ರಾನ್, ಇರ್ಫಾನ್, ಇಜ್ವಾನ್ ಮತ್ತು ಪುತ್ರಿ ಇಮ್ರಾಝ ಉಪವಾಸ ನಡೆಸುತ್ತಿದ್ದು, ಬಶೀರ್ ಬದುಕಿ ಬರಲಿ ಎಂದು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.
ಇನ್ನೂ ಬಶೀರ್ ಅವರ ಮೃತರಾದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ.

