ಹುಬ್ಬಳ್ಳಿ: ಕಳಸಾ-ಬಂಡೂರಿ, ಮಹದಾಯಿ ಯೋಜನೆ ಆಗ್ರಹಿಸಿ ಕಳಸಾ–ಬಂಡೂರಿ ರೈತ ಹೋರಾಟ ಸಮಿತಿ ಸೇರಿದಂತೆ ವಿವಿಧ ಕನ್ನಡಪರ, ರೈತ ಸಂಘಟನೆಗಳು ಇಂದು ನೀಡಿದ್ದ ನೀಡಿ ಬಂದ್ ಬಹುತೇಕ ಯಶಸ್ವಿಯಾಗಿದೆ.
ನಗರದ ಚನ್ನಮ್ಮ ವೃತ್ತ, ಹೊಸೂರು ವೃತ್ತ ಸೇರಿದಂತೆ ನಾನಾ ಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ರೈತ ಹೋರಾಟ ಸೇನೆ,ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತು ಮಾನವ ಸರಪಳಿ ನಿರ್ಮಿಸಿ ಬಿಜೆಪಿ ವಿರುದ್ಧ ಘೋಷಣೆ ಕೂಗಿ ಟೈರ್ ಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ಜನಪ್ರತಿನಿಧಿಗಳ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಮಹದಾಯಿ ಬಿಕ್ಕಟ್ಟು ಬಗೆಹರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದ್ದು, ಜನವಿರೋಧಿ ಆಡಳಿತ ನಡೆಸುತ್ತಿದೆ. ಈ ಬಿಕ್ಕಟ್ಟು ಬಗೆಹರಿಸಲು ನರಗುಂದಲ್ಲಿ 800 ದಿನಗಳಿಂದ ಪ್ರತಿಭಟನೆ ಮಾಡುತ್ತಾ ಬಂದಿದ್ದರು ರಾಜಕೀಯ ನಾಯಕರು ನಮಗೆ ಸ್ಪಂದಿಸಿಲ್ಲ ಎಂದು ಧರಣಿನಿತರರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಕೆಲವೆಡೆ ಹೊಟೇಲ್ ಮಾಲಕರು ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾಗ ಪ್ರತಿಭಟನಾಕಾರು ಸ್ಥಳಕ್ಕಾಗಮಿಸಿ ಹೋಟೆಲನಲ್ಲಿದ್ದ ತಿಂಡಿ ತಿನಿಸುಗಳನ್ನ ಹೊರ ಇಟ್ಟು ಬಂಧಿಸುವಂತೆ ಮಾಡಿದರು.
ಮಲ್ಲೇಶ್ವರಂ ನಿಂದ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ಮನವಿ ಸಲ್ಲಿಸಲಿರುವ ರೈತರು ಅಲ್ಲಿಂದ ಮುಖ್ಯ ಮಂತ್ರಿಗಳ ಗೃಹ ಕಚೇರಿ, ಚುನಾವಣ ಆಯೋಗಕ್ಕೆ ತೆರಳಿ ಮನವಿ ಸಲ್ಲಿಸಲಿದ್ದಾರೆ. ಪೊಲೀಸರು ರಾಜಭವನದ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿದ್ದು , ಹೋರಾಟಗಾರರ ಪೈಕಿ ನಾಲ್ವರಿಗೆ ಮಾತ್ರ ರಾಜಭವನ ಪ್ರವೇಶಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲ್ಲಿಸಲು ಅವಕಾಶ ನೀಡಿದ್ದಾರೆ.
ಜನ-ಜೀವನ ಅಸ್ತ ವ್ಯಸ್ತ: ನಗರದಲ್ಲಿ ಪ್ರತಿಭಟನಾ ಕಾವು ಹೆಚ್ಚುತ್ತಿದ್ದಂತೆ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಅಲ್ಲದೆ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಸಾರ್ವಕನಿಕರು ಹಾಗೂ ಪ್ರಯಾಣಿಕರಿಕರು ತೊಂದರೆ ಕೀಡಾದರು.
ಕೈ ಕೊಯ್ದು ಆಕ್ರೋಶ: ಧಾರವಾಡ ಜಿಲ್ಲಾ ಘಟಕದ ಯುವ ಸೇನೆಯ ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಕಾರ್ಯಕರ್ತರು ಕೈಯನ್ನು ಬ್ಲೇಡ್‌ನಿಂದ ಕೈಕೊಯ್ದು ಮೇಲೆತ್ತುವ ಮೂಲಕ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಧರಣಿಗೆ ಮುಂದಾರರು. ಕೂಡಲೇ ಎಚ್ಚೆತ್ತ ಪೊಲೀಸರು ಧರಣಿನಿರತರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.


