0003

ಹುಬ್ಬಳ್ಳಿ: ಇಲ್ಲಿನ ದುರ್ಗದ ಬೈಲ್ ನಲ್ಲಿ ಪರೇಶ್ ಮೇಸ್ತ ನಿಗೂಢ ಸಾವು ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆ ಮಂಗಳವಾರ ನಡೆಯಿತು.

ಈ ವೇಳೆ ಸಬೆಯನ್ನುದ್ದೇಶಿಸಿ ಮಾತನಾಡಿದ ಆರೆಸ್ಸೆಸ್ ಪ್ರಜ್ಞಾ ಪ್ರವಾಹದ ಸಂಚಾಲಕ ರಘುನಂದನ್ ಮಾತನಾಡಿ, ಈ ಸಭೆಯಲ್ಲಿ ಪೊಲೀಸರು ಇಲ್ಲದಿದ್ದರೆ ಎಲ್ಲ ಪ್ರತಿಭಟನಾಕಾರರ ಕೈಯಲ್ಲಿ ತಲ್ವಾರ್‌ ಇರುತ್ತಿದ್ದವು. ರಾಜ್ಯ ಕಾಂಗ್ರೆಸ್ ಸರ್ಕಾರ ‌ಹಿಂದೂಗಳ ಹತ್ಯೆಯ ಮೂಲಕ‌ ಹಿಂದುಗಳನ್ನು ಕೆಣಕುತ್ತಿದೆ. ಇಲ್ಲಿ ಕೈಯಲ್ಲಿ ಕೇಸರಿ ಧ್ವಜಗಳ ಬದಲು ಕಲ್ಲುಗಳು ಹಿಡಿದಿದ್ದರೆ ಸುತ್ತಲಿನ ಕಟ್ಟಡಗಳು ನೆಲಸಮವಾಗುತ್ತಿದ್ದವು ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಬಳಿಕ ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಮುಲ್ಲಾ ಸಿದ್ದರಾಮಯ್ಯ ನವರ ರಾಜ್ಯ ಸರಕಾರ ‌ದೇಶದ್ರೋಹಿಗಳನ್ನು ಸಲಹುತ್ತಿದೆ ಎಂದು ಆರೋಪಿಸಿದ ಅವರು, ಪಾಕಿಸ್ತಾನ ಜಿಂದಾಬಾದ್ ಘೋಷಿಸಿದವರ ನಾಲಿಗೆ ಕತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

By Suddi9

Leave a Reply

Your email address will not be published. Required fields are marked *