ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯೆಡಿಯೂರಪ್ಪ ಅವರಿಗೆ ಹೃದಯಾಘಾತದಿಂದ ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕೇಡಿಗಳು ಸಂದೇಶವೊಂದನ್ನು ಹರಿಯಬಿಟ್ಟಿರುವ ಘಟನೆ ಸೋಮವಾರ ನಡೆದಿದೆ.
ಹಬ್ಬಿಸಿರು ಸಂದೇಶದಲ್ಲಿ “ಡಾಲರ್ ಕಾಲನಿ ಸ್ವಗ್ರಹದಲ್ಲಿ ಗುಜರಾತ್ ಚುನಾವಣಾ ಫಲಿತಾಂಶ ವೀಕ್ಷಿಸುತ್ತಿದ್ದಾಗ ಯೆಡಿಯೂರಪ್ಪವರಿಗೆ ಹೃದಯಾಘಾದಿಂದ ಕುಸಿದು ಬಿದ್ದು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ” ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ, ಇದರೊಂದಿಗೆ ಯೆಡಿಯೂರಪ್ಪರವರ ಹಳೆ ಫೋಟೊಗಳನ್ನು ಹರಿಯಬಿಡಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
