ಕಲಬುರಗಿ: ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಆರೋಪಿಯನ್ನು ಗುಂಡು ಹಾರಿಸಿ ಇಲ್ಲಿನ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಶುಕ್ರವಾರ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಯಶ್ವಂತರಾಯ ಬೆಟ್ಟ ಜೇವರ್ಗಿ ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿಯನ್ನು ಕಮಲಾಪುರದಲ್ಲಿ ಬಂಧಿಸಲು ಯತ್ನಿಸಿದಾಗ, ತಪ್ಪಿಸಿ ಹೋಡಿ ಹೋಗಿದ್ದಾನೆ. ಬಳಿಕ ತಾವರಗೇರಾ ಕ್ರಾಸ್ ಬಳಿ ಪೊಲೀಸರು ಸರ್ಪ ಗಾವಲು ಹಾಕಲು ಮುಂದಾದಾಗ ಆರೋಪಿ ಪೊಲೀಸರ ಮೇಲೆ ದಾಳಿ ಪ್ರತಿದಾಳಿ ಮಾಡಿದ್ದಂರಿದ ಮೂವರು ಪೋಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ವೇಳೆ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಗಾಯಗೊಂಡ ಪೊಲೀಸರನ್ನು ಸೇರಿ ಆರೋಪಿಯನ್ನು ಕಲಬುರಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏನಿದು ಪ್ರಕರಣ: ಆರೋಪಿ ಯಶ್ವಂತ, ಈ ಹಿಂದೆ ತಾಜ ಸುಲ್ತಾನಪುರ ಗ್ರಾಮದ ಎಲೆಕ್ಟ್ರಿಕ್ ಲ್ ಗುತ್ತಿಗೆದಾರ ಮೋನಪ್ಪ ಸುತಾರ ಎಂಬವರನ್ನು ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಅಲ್ಲದೆ ಆತನ ವಿರುದ್ಧ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳಿದ್ದು, ಈಚೆಗೆ ಆತನಿಗೆ ದರೋಡೆ ಪ್ರಕರಣದಲ್ಲೊಂದರಲ್ಲಿ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾದ್ದ.
