ವಿಟ್ಲ: ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಮತ್ತು ಮಾರ್ಷಲ್ ಆಟ್ರ್ಸ್ ಇವರ ವತಿಯಿಂದ ನಡೆಸಿದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಗ್ರೂಪ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ, ಕಟಾ ಮತ್ತು ಕುಮಿಟೆ ವಿಭಾಗಲ್ಲಿ ದ್ವಿತೀಯ ಸ್ಥಾನ ಪಡೆದ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ರಂಜಿತ್ ಜಿ ಆರ್. ಇವರು ರಾಜಾರಾಮ ಮತ್ತು ರೇಷ್ಮಾ ರಾಜಾರಾಮ ಬಲಿಪಗುಳಿ ದಂಪತಿಯ ಪುತ್ರ. ಇವರು ಕರಾಟೆ ಶಿಕ್ಷಕ ಮಾಧವ ಅಳಿಕೆಯವರ ಶಿಷ್ಯ.
