ವಿಟ್ಲ: ಪಟ್ಟಣ ಪಂಚಾಯತ್‍ನ ಪಳಿಕೆ ಹಿಂದೂ ರುದ್ರ ಭೂಮಿಯಲ್ಲಿ ಆಂತರಿಕ ರಸ್ತೆ ಕಾಂಕ್ರೀಟಿಕರಣಕ್ಕೆ ಹದಿನಾಲ್ಕನೇ ಹಣಕಾಸು ಯೋಜನೆಯಡಿ ರೂ 3.5 ಲಕ್ಷ ಅನುದಾನ ಲಭ್ಯವಿರುತ್ತದೆ. ಈ ಕಾಮಗಾರಿಯ ಶಿಲಾನ್ಯಾಸವನ್ನು ಪಟ್ಟಣ ಪಂಚಾಯತ್‍ನ ಸದಸ್ಯೆ ಚಂದ್ರಕಾಂತಿ ಶೆಟ್ಟಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ, ಇಂಜಿನೀಯರ್ ಶ್ರೀಧರ ನಾಯ್ಕ್, ಸದಸ್ಯ ಶ್ರೀಕೃಷ್ಣ, ಗುತ್ತಿಗೆದಾರ ರವಿನಾರಾಯಣ ಮುಂತಾದವರು ಉಪಸ್ಥಿತರಿದ್ದರು.
