ವಿಟ್ಲ :ಪಟ್ಟಣ ಪಂಚಾಯತ್ನ ತ್ಯಾಜ್ಯ ವಿಲೇವಾರಿ ಘಟಕದ ಕಾಂಕ್ರೀಟ್ ಆವರಣ ಗೋಡೆಗಾಗಿ ರೂ 7 ಲಕ್ಷ ಅನುದಾನ ಲಭ್ಯವಿದ್ದು ಈ ಕಾಮಗಾರಿಯ ಶಿಲಾನ್ಯಾಸವನ್ನು ಪಟ್ಟಣ ಪಂಚಾಯತ್ನ ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ, ಅರುಣ್ ಎಂ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ಮುಖ್ಯಾಧಿಕಾರಿ ಮಾಲಿನಿ, ಇಂಜಿನೀಯರ್ ಶ್ರೀಧರ ನಾಯ್ಕ್, ಸದಸ್ಯರಾದ ಚಂದ್ರಕಾಂತಿ ಶೆಟ್ಟಿ ಮತ್ತು ಶ್ರೀಕೃಷ್ಣ ಗುತ್ತಿಗೆದಾರ ರವಿನಾರಾಯಣ ಮುಂತಾದವರು ಉಪಸ್ಥಿತರಿದ್ದರು.
