antarvedi

ಭಾಗ್ಯನಗರ : ದೇವಸ್ಥಾನಗಳ ವ್ಯವಸ್ಥಾಪನೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ಆಂಧ್ರಪ್ರದೇಶದ ೨೩ ಸಾವಿರ ದೇವಸ್ಥಾನ ಗಳನ್ನು ಮಾಹಿತಿ ಹಕ್ಕು ಅಧಿಕಾರ ದಲ್ಲಿ ತರಲಿದೆ ಎಂದು ರಾಜ್ಯದ ಸಾರ್ವಜನಿಕ ವಿಶ್ವಸ್ತಮಂತ್ರಿ ಪಿ. ಮಾನಿಕಲ್ಯಾ ರಾವ್ ಇವರು ಮಾಹಿತಿ ನೀಡಿದರು. ಈ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇವರು ಒಪ್ಪಿಗೆ ನೀಡಿದ್ದಾರೆ. ಈ ನಿರ್ಣಯದಿಂದ ಆಂಧ್ರಪ್ರದೇಶದ ತಿರುಪತಿ, ಶ್ರೀಶೈಲ್ಯಮ್ ಮುಂತಾದ ಪ್ರಸಿದ್ಧ ದೇವಸ್ಥಾನಗಳ ಸಹಿತ ಸುಮಾರು 23 ಸಾವಿರ ದೇವಸ್ಥಾನಗಳ ವ್ಯವಸ್ಥಾಪನೆಯ ಮಾಹಿತಿಯು ನಾಗರಿಕರಿಗೆ ಸಿಗಲಿದೆ. ಸರಕಾರದ ಈ ಉದ್ದೇಶ ಹಿಂದೂಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಲಿದೆ ಎನ್ನಲಾಗುತ್ತಿದೆ.

By suddi9

Leave a Reply

Your email address will not be published. Required fields are marked *