ವಿಟ್ಲ : ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಸರ್ವಧರ್ಮ ಪ್ರಾರ್ಥನೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಸರಸ್ವತಿ ಸ್ತ್ರೋತ್ರ , ಗುರುವಂದನೆ , ಧರ್ಮಗ್ರಂಥಗಳ ಪಠಣ , ಜಯಬೋಲೋ ಹಾಡು, ರಘುಪತಿ ರಾಘವ ರಾಜಾರಾಮ್ , ಶಾಂತಿ ಮಂತ್ರ ಕೊನೆಯಲ್ಲಿ ಮೌನ ಪ್ರಾರ್ಥನೆ ಆಯೋಜಿಸಲಾಗಿತ್ತು.

ಗಾಂಧಿ ಜಯಂತಿ ಆಚರಣೆಯ ಕುರಿತಾಗಿ ಶಾಲಾ ಆಡಳಿತಾಧಿಕಾರಿ ಸಿ. ಶ್ರೀಧರ್ ಮಾತನಾಡಿ “ಗಾಂಧೀಜಿಯ ಮಾತು, ಕೃತಿ, ಸಿದ್ಧಾಂತ ಅಳವಡಿಸಿಕೊಂಡಾಗ ಮಾತ್ರ ಸತ್ಪ್ರಜೆಗಳಾಗಿ ಬೆಳೆಯಲು ಸಾಧ್ಯ” ಎಂದರು. ಪ್ರೌಢಶಾಲಾ ಮುಖ್ಯಶಿಕ್ಷಕಿ ವಿಜಯಲಕ್ಷ್ಮೀವಿ.ಶೆಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಗ್ರೇಸ್.ಪಿ. ಸಲ್ಡಾನಾ, ಸ್ಕೌಟ್ ಮಾಸ್ಟರ್ ರಾಮಚಂದ್ರ, ಗೈಡ್ ಕ್ಯಾಪ್ಟನ್ , ಅನಿತಾ ಜಿ , ಬುಲ್ ಬುಲ್ ಫ್ಲಾಕ್ ಲೀಡರ್ ಯಶೋದಾ , ಕಬ್ ಮಾಸ್ಟರ್ ಹರಿಣಾಕ್ಷಿ , ಬನ್ನಿ ಗೈಡ್ಸ್, ಐಡಾ ಲೋಬೋ, ಮರೀನಾ .ಪಿ. ಸಲ್ಡಾನಾ ಮೊದಲಾದವರು ಉಪಸ್ಥಿತರಿದ್ದರು.
