ವಿಟ್ಲ: `ಕ್ರೀಡೆ ಸೌಹಾರ್ದತೆಯ ಸಂಕೇತ, ಕ್ರೀಡಾಕೂಟವನ್ನು ಹಬ್ಬಗಳೊಂದಿಗೆ ಆಚರಿಸಿದಾಗ ಅದು ನಮ್ಮಲ್ಲಿ ಸಾಮರಸ್ಯಕ್ಕೆ ಪ್ರೇರಣೆ ನೀಡಿದಂತಾಗುತ್ತದೆ’ ಎಂದು ಕೆಪಿಟಿಸಿಎಲ್ ನೌಕರರ ರಾಜ್ಯ ಉಪಾಧ್ಯಕ್ಷ ಹೆಚ್ ಎಸ್ ಗುರುಮೂರ್ತಿ ಹೇಳಿದರು. ಅವರು ವಿಟ್ಲ ಮೆಸ್ಕಾಂ ಉಪವಿಭಾಗದ ಅಧಿಕಾರಿಗಳು, ನೌಕರರ ಸಂಘ ಹಾಗೂ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆ ದಾರರ ಜಂಟಿ ಆಶ್ರಯದಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ 6 ನೇ ವರ್ಷದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತಾಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಿಟ್ಲ ಮೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಕ ಇಂಜಿನೀಯರ್ ಸುನಿಲ್ ಜೋಷಿ ವಹಿಸಿದ್ದರು. ಅತಿಥಿಗಳಾಗಿ ರಾಜ್ಯ ಅನಿಮತಿ ಪಡೆದ ವಿದ್ಯುತ್ ಗಿತ್ತಿಗೆದಾರರ ಸಂಘದ ವಿಟ್ಲ ಸಮಿತಿ ಉಪಾಧ್ಯಕ್ಷ ಕೃಷ್ಣ ಬನಾರಿ, ಕೇಂದ್ರ ಸಮಿತಿ ಸದಸ್ಯ ಬಾಲಖೃಷ್ಣ ಸೆರ್ಕಳ, ಕೆಪಿಟಿಸಿಎಲ್ ಕೇಂದ್ರ ಸಮಿತಿ ಸದಸ್ಯ ಶಂಕರ ಪ್ರಕಾಶ್, ಬಂಟ್ವಾಳ ಕೆಪಿಟಿಸಿಎಲ್ ನೌಕರರ ಸಂಘದ ಸ್ಥಳೀಯ ಸಮಿತಿ ಅಧ್ಯಕ್ಷ ಬಾಸ್ಕರದಾಸ್, ವಿಟ್ಲ ಮೆಸ್ಕಾಂ ಮೇಲ್ವಿಚಾರಕಿ ಗೀತಾ, ಮೆಕ್ಯಾನಿಕ್ ದರ್ಜೆ ನೌಕರ ನಾಗರಾಜ ಹಾಗೂ ಕೇಶವ ಪೂಜಾರಿ ಭಾಗವಹಿಸಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ರಾಜು ವಿದ್ಯುತ್ ಗುತ್ತಿಗೆದಾರರ ಸಂಘ ವಿಟ್ಲ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯ ವಹಿಸಿದ್ದರು. ಬಂಟ್ವಾಳ ಮೆಸ್ಕಾಂನ ಸಹಾಯಕ ಇಂಜೀನಿಯರ್ ಸತೀಶ ಸಪಲ್ಯ, ಹಿರಿಯ ಸಹಾಯಕ ನೆಲ್ಸನ್ ನವೀನ್ ಕುಮಾರ್, ಗುತ್ತಿಗೆದಾ ಜಿಲ್ಲಾ ಸಮಿತಿ ಸದಸ್ಯ ಬಾಬು ಮೂಲ್ಯ, ಶಾಖಾಧಿಕಾರಿಗಳಾದ ದೇವಿಕಿರಣ್, ಪ್ರಸಾದ್, ದಿನೇಶ್, ಗುತ್ತಿಗೆದಾರ ಅಬ್ಬಾಸ್ ಮತ್ತು ಜೋನ್ ಅತಿಥಿಗಳಾಗಿ ಭಾಗವಹಿಸಿ ಬಹುಮಾನ ವಿತರಿಸಿದರು. ವಿಟ್ಲ ಕೆಪಿಟಿಸಿಎಲ್ ನೌಕರರ ಸಂಘದ ಪ್ರಾಥಮಿಕ ಸಮಿತಿ ಅಧ್ಯಕ್ಷ ಪದ್ಮನಾಭ ಗೌಡ ಅಡ್ಯೇಯಿ ಸ್ವಾಗತಿಸಿದರು. ಉಕ್ಕುಡ ಶಾಖಾಧಿಕಾರಿ ಆನಂದ ನಿರೂಪಿಸಿ ವಂದಿಸಿದರು.
ವಾಲಿಬಾಲ್ ಪ್ರಥಮ ಕೆಪಿಟಿಸಿಎಲ್ ವಿಟ್ಲ, ದ್ವಿತೀಯ ಮೆಸ್ಕಾಂ ಸಾಲೆತ್ತೂರು. ಕ್ರಿಕೆಟ್ ಪ್ರಥಮ ಕೆಪಿಟಿಸಿಎಲ್ ವಿಟ್ಲ, ದ್ವಿತೀಯ ಮೆಸ್ಕಾಂ ಸಾಲೆತ್ತೂರು. ಹಗ್ಗಜಗ್ಗಾಟ ಪ್ರಥಮ ಕೆಪಿಟಿಸಿಎಲ್ ವಿಟ್ಲ, ದ್ವಿತೀಯ ಎಲ್ ಇ ಸಿ ವಿಟ್ಲ. ಕಬಡ್ಡಿ ಪ್ರಥಮ ಮೆಸ್ಕಾಂ ಉಕ್ಕುಡ, ದ್ವಿತೀಯ ಮೆಸ್ಕಾಂ ಸಾಲೆತ್ತೂರು ಗಳಿಸಿದ್ದಾರೆ.
