ಸುದ್ದಿ9pejawar-swamijiಮುಂಬಯಿ: ಬಹನ್ಮುಂಬುಯಲ್ಲಿ 26ನೇ ವಾರ್ಷಿಕ‌ ಚಾತುರ್ಮಾಸ್ಯ ವ್ರತವನ್ನು ಆಚರಿಸುತ್ತಿರುವ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು 26ನೇ ರ್ವಾಕ‌ ಚಾತುರ್ಮಾಸ್ಯ ವ್ರತವನ್ನು ಆಚರಿಸುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭಕ್ತಾದಿಗಳ ಅಪೇಕ್ಷೆಯ ಮೇರೆಗೆ ಆ. 7 ರಿಂದ ಪ್ರಾರಂಭಗೊಂಡು ಆ. 9 ರವರೆಗೆ ಜರಗಲಿದೆ. ಮೂರು ದಿನಗಳ ಕಾಲ ದಿನಂಪ್ರತಿ ಸಂಜೆ 6.30 ರಿಂದ ರಾತ್ರಿ 8.00 ಗಂಟೆಯ ವರೆಗೆ ಶ್ರೀ ಅದಮಾರು ಮಠ, 115-ಹೆಚ್‌, ಎಸ್‌. ವಿ. ರೋಡ್‌, ಫೆ„ಯರ್‌ ಬ್ರಿಗೇಡ್‌ ಸಮೀಪ, ಇರ್ಲಾ, ಅಂಧೇರಿ ಪಶ್ಚಿಮ, ಮುಂಬಯಿ ಇಲ್ಲಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಶ್ರೀ ಅದಮಾರು ಮಠ ಮುಂಬಣಿ ಇದರ ಲಕ್ಷಿ$¾àನಾರಾಯಣ ಮಚ್ಚಿಂತಾಯ ತಿಳಿಸಿದ್ದಾರೆ. ಆ. 9 ರಂದು ಉಪನ್ಯಾಸದ ನಂತರ ಶ್ರೀಗಳವರಿಂದ ಶ್ರೀ ರಾಮ ವಿಠuಲ ದೇವರ ರಾತ್ರಿ ಪೂಜೆ, ಫಲ ಮಂತ್ರಾಕ್ಷತೆ, ತದನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ‌ಲ್ಲಿ ಮಹಾನಗರದಲ್ಲಿನ ಸಮಸ್ತ ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀಹರಿ ಗುರುಗಳ ಕೃಪೆಗೆ ಪಾತ್ರರಾಗುವಂತೆ ವಿನಂತಿಸಲಾಗಿದೆ.

 

By suddi9

Leave a Reply

Your email address will not be published. Required fields are marked *