ವಾಮಂಜೂರು ; ತುಳುನಾಡಿನ ಯುಗಪುರುಷರಾದ ಕೊಟಿ ಚೆನ್ನಯ್ಯರ ತಾಯಿ ದೇಯಿ ಬೈದೆತಿಯವರ ಮೂರ್ತಿಗೆ ಅಪಚಾರ ಎಸಗಿರುವುದನ್ನು ಖಂಡಿಸಿ, ತುಳುನಾಡಿನ ನಂಬಿಕೆಗೆ ಅಪಚಾರ ಎಸಗಿದ ಬಂಧಿತ ಆರೋಪಿಗೆ ಹೆಚ್ಚಿನ ಶಿಕ್ಷೆಯಾಗಬೇಕೆಂದು ಆಗ್ರಹಿಸಿ ಬಿಲ್ಲವ ಸಂಘಟನೆಗಳ ಒಕ್ಕೂಟ ನಾಳೆ ವಾಮಂಜೂರು ಜಂಕ್ಷನ್ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ.
