ಗಂಜಿಮಠ ಇಲ್ಲಿನ ಪೂಂಜಾ ಟೈಲ್ ಫ್ಯಾಕ್ಟರಿ ಮುಂಭಾಗದಲ್ಲಿರುವ ಕಟ್ಟಡಕ್ಕೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ.
ಬಾಬು ಸಮಾನಿ ಎಂಬುವವರಿಗೆ ಸೇರಿದ ಕಟ್ಟಡ ಇದಾಗಿದ್ದು ಕಟ್ಟಡ ಭಾಗಷಃ ಹಾನಿಯಾಗಿದೆ. ಕಟ್ಟದಲ್ಲಿ ಬಾಡಿಗೆದಾರರಾಗಿದ್ದ ,ಪ್ರಭಾಕರ್ ಹಾಗೂ ಗೀತಾ ವಾಸಿಸುತ್ತಿರುವ ಕೊಠಡಿಗೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಸಾಮಾಗ್ರಿಗಳಿಗೆ ಹಾನಿಯಾಗಿದೆ.
ಕೊಠಡಿಯೊಳಗಿದ್ದ ಬಟ್ಟೆ, ಪೀಠೋಪಕರಣಗಳು , ಇಲೆಕ್ಟ್ರಿಕ್ ಸಾಮಾಗ್ರಿ ನಗದು ಹಾಗೂ ಚಿನ್ನಾಭರಣಗಳು ಹಾಗೂ ಹಲವು ದಾಖಲೆಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಘಟನೆಯಿಂದಾಗಿ ಪಕ್ಕದ ಕೊಠಡಿಯ ಗೋಡೆಯಲ್ಲೂ ಬಿರುಕು ಕಾಣಿಸಿಕೊಂಡಿದ್ದು ನಿವಾಸಿಗಳು ಭಯಭೀತರಾಗಿದ್ದಾರೆ. ಮೇಲ್ನೋಟಕ್ಕೆ ಘಟನೆಗೆ ವಿದ್ಯುತ್ ಶಾಟ ಸರ್ಕಿಟ್ ಕಾರಣವೆಂಬಂತೆ ಕಂಡು ಬಂದರೂ, ನೈಜ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಬೆಂಕಿ ನಂದಿಸುವಲ್ಲಿ ಸಾರ್ವಜನಿಕರು ಮೂಡಬಿದಿರೆ ಹಾಗೂ ಮಂಗಳೂರು ಅಗ್ನಿಶಾಮಕದಳದ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದಾರೆ. ಗಂಜಿಮಠ ಗ್ರಾಮ ಪಂಚಾಯತ್ನ ಅದ್ಯಕ್ಷ ಹಾಗೂ ಸರ್ವ ಸದಸ್ಯರು ಸ್ಥಳಕ್ಕಾಗಮಿಸಿ ಸಹಕರಿಸಿದ್ದಾರೆ ಅದರಲ್ಲೂ ಗೀತಾರಿಗೆ ಧೈರ್ಯ ತುಂಬುವಲ್ಲಿ ಗಂಜಿಮಠ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜೆಸಿಂತಾ ಕಾರ್ಯನಿರ್ವಹಿಸಿದ್ದು ಸರ್ವರ ಪ್ರಶಂಸೆಗೆ ಪಾತ್ರವಾಯ್ತು. ಬಜಪೆ ಠಾಣೆಯಲ್ಲಿ ಕೇಸು ದಾಖಲಾಗಿದೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.




