ಗಂಜಿಮಠ ಇಲ್ಲಿನ ಮಳಲಿ ಕ್ರಾಸ್ ಬಳಿಯ ನಿವಾಸಿ ಅಬಕಾರಿ ಅಧಿಕಾರಿ ಅಮರನಾಥ್ ಭಂಡಾರಿ ಇವರ ಮನೆಯಲ್ಲಿ ಅಗ್ನಿ ಅವಗಢ ಸಂಭವಿಸಿದ್ದು ಲಕ್ಷಾಂತರ ರುಪಾಯಿ ಮೌಲ್ಯದ ಸ್ವತ್ತುಗಳೂ ಬೆಂಕಿಗಾಹುತಿಯಾಗಿವೆ.12 vp amarnath

12 vp mescom

ಸೋಮವಾರ ರಾತ್ರಿ ಸುಮಾರು 12; ಘಂಟೆಯ ವೇಳೆಗೆ ಮನೆಯಲ್ಲಿ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಹಾಗೂ ಪಕ್ಕದ ಕೊಠಡಿಯಲ್ಲೂ ಸಹಾ ಬೆಂಕಿಯ ಜ್ವಾಲೆ ಕಂಡುಬಂತು. ಕೂಡಲೇ ಕಾರ್ಯಪ್ರವೃತ್ತರಾದ ಅಮರ್‍ರವರು ಮನೆಯ ಮನೆಯ ವಿದ್ಯುತ್ ಸಂಪರ್ಕವನ್ನನು ಕಡಿತಗೊಳಿಸಲು ಹೊರಗೆ ಓಡಿದಾಗ ಮನೆಯ ಮೀಟರ್‍ಬೋರ್ಡಿನಲ್ಲೂ ಬೆಂಕಿ ವ್ಯಾಪಿಸಿತ್ತು ಎನ್ನುತ್ತಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಮೂಡಬಿದಿರೆ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.DSC_6296

ಮನೆಯ ಬಳಿಯಿರುವ ವಿದ್ಯುತ್ ಹೈಟೆನ್ಶನ್ ಕಂಬದ ತಂತಿ ಕಡಿದು ಬಿದ್ದುದ್ದೇ ಘಟನೆಗೆ ಕಾರಣ ಎನ್ನಲಾಗಿದೆ.ಮನೆಯ ಪಕ್ಕದ ಬಯಲಿನಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದಿದ್ದರಿಂದ ಹೆಚ್ಚಿನ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ ಎನ್ನಲಾಗಿದೆ , ಮನೆಯಲ್ಲಿದ್ದ ಪೀಠೋಪಕರಣಗಳು, ಕಂಪ್ಯೂಟರ್ ,ಟಿವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್, ಎಸಿ, ಫ್ಯಾನ್ ಸೇರಿದಂತೆ ಸುಮಾರು ನಾಲ್ಕೈದು ಲಕ್ಷ ರುಪಾಯಿಗಳ ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ. ಜೊತೆಯಲ್ಲಿ ಅಕ್ಕಪಕ್ಕದ ರೊನಾಲ್ಡ್ ಹಾಗೂ ರವಿ ಕುಂದರ್ ಅವರ ಮನೆಗೂ ಹಾನಿಯಾಗಿದ್ದು ಟಿವಿ , ಫ್ಯಾನ್, ಮತ್ತು ಫ್ರಿಡ್ಜ್ ಸಂಪೂರ್ಣ ಹಾನಿಯಾಗಿದೆ . ಸ್ಥಳಕ್ಕೆ ಮೆಸ್ಕಾಂನ ಕಾರ್ಯನಿರ್ವಾಹಕ  ಇಂಜೀನಿಯರ್ ಸತೀಶ್, ಕೈಕಂಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರ್ ಮೋಹನ್ , ಪರಿವೀಕ್ಷಕರಾದ ಮಾರ್ಟಿನ್ ಉಪಪರಿವೀಕ್ಷಕರಾಧ ವಿರುಪಾಕ್ಷಪ್ಪ ಸ್ಥಳಕ್ಕಾಗಮಿಸಿ ಮಹಾಜರು ನಡೆಸಿದ್ದಾರೆ . ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ರಾತ್ರಿ ನಾವೆಲ್ಲಾ ಮಲಗಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪಕ್ಕದ ಬಯಲಿನಲ್ಲಿ ತಂತಿ ಕಡಿದು ಬಿದ್ದ ಕಾರಣ ಅಧಿಕ ವಿದ್ಯುತ್ ಪ್ರವಹಿಸಿ ಘಟನೆ ಸಂಭವಿಸಿದೆ . ಸುಮಾರು 4 ಲಕ್ಷ ಮೌಲ್ಯದ ಸ್ವತ್ತುಗಳು ಬೆಂಕಿಗಾಹುತಿಯಾಗಿದೆ. ತಂತಿ ಹಳೆಯದಾಗಿರುವ ಬಗ್ಗೆ ಮೆಸ್ಕಾಂಗೆ 2 ಬಾರಿ ಮನವಿ ಸಲ್ಲಿಸಿದ್ದರು ಕ್ರಮ ಕೈಗೊಂಡಿರಲಿಲ್ಲ.
* ಅಮರನಾಥ್ ಭಂಡಾರಿ ,ಡೆಪ್ಯುಟಿ ಸುಪರಿಡೆಂಟ್ ಅಬಕಾರಿ ಇಲಾಖೆ

ಸರಿಯಾದ ಕಾರಣ ಇನ್ನಷ್ಟೆ ತಿಳಿಯಬೇಕಿದೆ. ಹಿರಿಯ ಅಧಿಕಾರಿಗಳು ನೀಡುವ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳಬಹುದಷ್ಟೆ
* ಸತೀಶ್
ಮೆಸ್ಕಾಂ ಅಧಿಕಾರಿ.

ವೀಡಿಯೋ ನೋಡಲು  ಇಲ್ಲಿ ಕ್ಲಿಕ್ ಮಾಡಿ.

By Suddi9

Leave a Reply

Your email address will not be published. Required fields are marked *