ಮಂಗಳೂರು: ಭಾರತೀಯ ಜನತಾ ಪಾರ್ಟಿ ಗೋ ಸಂರಕ್ಷಣಾ ಪ್ರಕೋಷ್ಠದ ರಾಜ್ಯ ಸಹಸಂಚಾಲಕರಾದ ವಿನಯ್ ಎಲ್ ಶೆಟ್ಟಿ ರವರ ನೇತ್ರತ್ವದಲ್ಲಿ ಪ್ರಸ್ತುತ ಇರುವ ಪ್ರಾಣಿ ಹಿಂಸೆ ತಡೆ ಕಾಯಿದೆ 1960ನ್ನು ಪರಿಣಾಮಕಾರಿಗೊಳಿಸಲು ಕೇಂದ್ರ ಸರಕಾರವು ಕಾಯ್ದೆಯನ್ನು ತಿದ್ದು ಮಾಡುವಂತೆ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು,ಪ್ರಧಾನ ಕಾರ್ಯದರ್ಶಿ ಕ್ಯಾ.ಬ್ರಿಜೇಶ್ ಚೌಟ,ಕಿಶೋರ್ ರೈ,ದಕ್ಷಿಣ ಮಂಡಲದ ಗೋಪ್ರಕೋಷ್ಠದ ಸಹಸಂಚಾಲಕರಾದ ಸುದೀರ್ ಶೆಟ್ಟಿಗಾರ್,ರವಿಚಂದ್ರ ಕೆ.ಎಂ ಮುಂತಾದವರು ಉಪಸ್ಥಿತರಿದ್ದರು.
