ಉಳ್ಳಾಲ: ದುರ್ಗಾ ವಾಹಿನಿ ಮಹಿಳಾ ಮಂಡಳಿ, ಬಾಲಕೃಷ್ಣ ಮಹಿಳಾ ಮಂಡಳಿ ಮತ್ತು ಗೌರಿಗಣೇಶ ಮಹಿಳಾ ಮಂಡಳಿ ಮತ್ತು ಜನಪ್ರತಿನಿಧಿಗಳ ಕೂಡುವಿಕೆಯೋಂದಿಗೆ ಗಂಗಯ್ಯ ಗಟ್ಟಿ ಪಿಲಾರ್ ಮತ್ತು ಸಂಜೀವ ಗಟ್ಟಿ ಪಿಲಾರ್ ಇವರ ಗದ್ದೆಯಲ್ಲಿ ನಾಟಿ ಮಾಡುವುದರೊಂದಿಗೆ ಅರ್ಥಪೂರ್ಣವಾಗಿ ಆಟಿಡೊಂಜಿ ದಿನ ಆಚರಿಸಲಾಯ್ತು.
ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಮಾತನಾಡಿ ಹಿಂದಿನ ಕಾಲದಲ್ಲಿ ಆಟಿಡೋಂಜಿ ದಿನ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಆದರೆ ಈಗ ಎಲ್ಲಾ ಕಾರ್ಯಕ್ರಮಗಳು ಆಡಂಬರದಿಂದ ಕೂಡಿದೆ ಈಗಿನ ಆಟಿಡೋಂಜಿ ಕೂಟದಿಂದ ಕೃಷಿಕರಿಗೆ ಯಾವುದೇ ಲಾಭವಾಗುತ್ತಿಲ್ಲಿ ಅದಕ್ಕಾಗಿಯೇ ನಾವು ಅರ್ಥಪೂರ್ಣವಾಗಿ ನೇಜಿ ನಾಟಿ ಮಾಡುವ ಮೂಲಕ ಆಚರಿಸುತ್ತದ್ದೇವೆ ಎಂದರು.
ತಾಲೂಕು ಪಂಚಾಯತ್ ಸದಸ್ಯರುಗಳು ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
