ವಿಟ್ಲ: ವಿಶ್ವ ಹಿಂದೂ ಪರಿಷದ್ ಮಾತೃ ಮಂಡಳಿ ದುರ್ಗಾವಾಹಿನಿ ವಿಟ್ಲ ಇದರ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಮೂಜಾ ಸಮಿತಿ ಅಧ್ಯಕ್ಷೆಯಾಗಿ ರಾಜೇಶ್ವರಿ ಇವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಮೀನಾಕ್ಷಿದೇವಿ, ಉಪಾಧ್ಯಕ್ಷರುಗಳಾಗಿ ಚಂದ್ರಕಾಂತಿ ಮತ್ತು ಭಾರತಿ ಪ್ರಕಾಶ್, ಕಾರ್ಯದರ್ಶಿ ರಶ್ಮಿ ಹರೀಶ್, ಜತೆಕಾರ್ಯದರ್ಶಿ ಮೀನಾಕ್ಷಿ ನಾಗರಾಜ್, ಕೋಶಾಧಿಕಾರಿಯಾಗಿ ರೇವತಿ ರವೀಂದ್ರ ಹಾಗೂ ಸದಸ್ಯರುಗಳಾಗಿ ಮೂಕಾಂಬಿಕಾ, ಲೀಲಾವತಿ ಬಿ, ಸರಸ್ವತಿ, ಲೀಲಾವತಿ ಮತ್ತು ರತ್ನ ಇವರನ್ನು ಆಯ್ಕೆ ಮಾಡಲಾಯಿತು. ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾಧ್ಯಕ್ಷ ಆನಂದ ಕಲ್ಲಕಟ್ಟ, ಜಿಲ್ಲಾ ಸಹಕಾರ್ಯದರ್ಶಿ ಗೋವರ್ಧನ ಕುಮಾರ್ ಇಡ್ಯಾಳ ವಿಟ್ಲ ಇವರು ನೂತನ ಸಮಿತಿಯನ್ನು ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ಮೈತ್ರೇಯಿ ಗುರುಕುಲದ ವ್ಯವಸ್ಥಾಪಕ ಜಗನ್ನಾಥ ಕಾಸರಗೋಡು ಉಪಸ್ಥಿತರಿದ್ದರು.
