ಮಂಗಳೂರು : ಗುರುಪುರಕ್ಕೆ ಹತ್ತಿರದ ಕೊಳಕೆಬೈಲಿನಲ್ಲಿ ಫಲ್ಗುಣಿ ನದಿ ಬದಿಯಲ್ಲಿ ಕಟ್ಟಿಗೆ ಹೆಕ್ಕುತ್ತಿದ್ದ ವೃದ್ಧೆಯೊಬ್ಬರು ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಸಂಪಾ ಶೆಟ್ಟಿ(ಸುಮಾರು 70) ಎಂಬವರು ಪರಾರಿ ನಿವಾಸಿಯಾಗಿದ್ದು, ಎಂದಿನಂತೆ ನದಿ ದಡದಲ್ಲಿ ಕಟ್ಟಿಗೆ ಹೆಕ್ಕುವಾಗಿ ಆಕಸ್ಮಿಕವಾಗಿ ಕಾಲು ಜಾರಿ ನದಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಶವ ರವಾನಿಸಿದ್ದಾರೆ. ಇವರಿಗೆ ಪುತ್ರಿಯೊಬ್ಬರಿದ್ದಾರೆಂದು ಸ್ಥಳೀಯರೊಬ್ಬರು ತಿಳಿಸಿದರು.

By suddi9

Leave a Reply

Your email address will not be published. Required fields are marked *