ಬೆಂಗಳೂರು: ಪ್ರತಿ ದಿನ ದರ ಪರಿಷ್ಕರಣೆ ವಿರೋಧಿಸಿ ಅಖಿಲ ಭಾರತ ಪೆಟ್ರೋಲ್ ವರ್ತಕರ ಸಂಘ ಜುಲೈ 12ರಂದು ಬಂಕ್ ಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಮುಂದಾಗಿದೆ.ದೇಶಾದ್ಯಂತೆ ನಡೆಯುವ ಪ್ರತಿಭಟನೆ ಸಾಥ್ ನೀಡಲು ರಾಜ್ಯಾದ್ಯಂತ ಮೂರುವರೆ ಸಾವಿರ ಪೆಟ್ರೋಲ್ ಬಂಕ್‍ಗಳು ಬಂದ್ ಆಗಲಿದೆ ಎಂದು ವರ್ತಕರ ಸಂಘದ ಉಪಾಧ್ಯಾಕ್ಷ ಅನೀಸ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.adada


ಈ ಬಂದ್ ಗೆ ರವೀಂದ್ರನಾಥ್ ನೇತೃತ್ವದ ಪೆಟ್ರೋಲ್ ಡೀಲರ್ಸ್ ಆಸೋಸಿಯೇಷನ್ ಬೆಂಬಲ ಕೊಟ್ಟಿಲ್ಲ. ಆದರೆ ಸುಮಾರು ರಾಜ್ಯದ 24 ಜಿಲ್ಲೆಯಲ್ಲಿ ನಮ್ಮ ಸಂಘಟನೆ ಪ್ರಬಲವಾಗಿದೆ. ತೈಲ ಕಂಪನಿ ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಬಂದ್ ನಡೆಸಿಯೇ ನಡೆಸುತ್ತೇವೆ ಎಂದು ಅವರು ಹೇಳಿದರು.ಪ್ರತಿನಿತ್ಯ ದರ ಪರಿಷ್ಕರಣೆಯಾಗುತ್ತಿರುವುದರಿಂದ ನಮಗೆ ನಷ್ಟವಾಗುತ್ತಿದೆ. ವರ್ತಕರ ಸಲಹೆ ಪಡೆಯದೇ ಕಂಪೆನಿಗಳು ಪ್ರತಿನಿತ್ಯ ಪರಿಷ್ಕರಣೆ ಮಾಡುತ್ತಿವೆ. ಜುಲೈ 12ರಂದು ಬೆಳಗ್ಗೆಯಿಂದ ರಾತ್ರಿಯವರೆಗೆ ಪೆಟ್ರೋಲ್, ಡಿಸೇಲ್ ಸಿಗಲ್ಲ. ಅಷ್ಟೇ ಅಲ್ಲದೇ ಆ ದಿನ ತೈಲವನ್ನು ಖರೀದಿಸಲ್ಲ ಎಂದು ಅವರು ತಿಳಿಸಿದರು.

By suddi9

Leave a Reply

Your email address will not be published. Required fields are marked *