ಮಂಗಳೂರು:ಗಣಕ ತಂತ್ರಜ್ಞ ಸಂಸ್ಥೆ ದಿಯಾ ಸಿಸ್ಟಮ್ ಇದರ ಅಂಗ ಸಂಸ್ಥೆಯಾದ ಜಿ.ಟಿ. ಪ್ರತಿಷ್ಠಾನ ಮತ್ತು ಭಾರತೀಯ ವಿದ್ಯಾಭವನದ ವತಿಯಿಂದ ಏ.22ರಂದು ನೃತ್ಯ ಸಂಜೆ ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪ್ರತಿಷ್ಠಾನದ ಸದಸ್ಯ ಶ್ರೀನಿವಾಸ್ ರಾವ್, ಮಂಗಳೂರು ಪರಿಸರದ ಶಾಸ್ತ್ರೀಯ ನೃತ್ಯ ಕಲಾ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 5 ಗಂಟೆಗೆ ಕರ್ಣಾಟಕ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಶ್ರೀನಿವಾಸ ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ನೃತ್ಯಭಾರತಿ ಕದ್ರಿ, ಶ್ರೀದೇವಿ ನೃತಗಯಕೇಂದ್ರ, ಶ್ರೀ ನಾಟ್ಯಾಂಜಲಿ ಸುರತ್ಕಲ್, ಚಕ್ರಪಾಣಿ ನೃತ್ಯ ಕಲಾ ಕೇಂದ್ರ ಮತ್ತು ಸೌರಭ ಕಲಾ ಪರಿಷತ್‍ನ ಕಲಾವಿದರು ಶಾಸ್ತ್ರೀಯ ಭರತನಾಟ್ಯ ಪ್ರಸ್ತುತಪಡಿಸಲಿದ್ದಾ ರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ವಿಜಯ್ ಕುಮಾರ್, ಭಾರತೀಯ ವಿದ್ಯಾಭವನದ ಜಿ.ಆರ್.ರೈ ಇದ್ದರು.
