
ಬಜ್ಪೆ: ಗಣರಾಜೋರತ್ಸವದ ಅಂಗವಾಗಿ ಮಕ್ಕಳೇ ಅನ್ಚೇಶಿಸಿದ ವಸ್ತುಗಳನ್ನು ಗುರುಪುರ ಕೈಕಂಬ ಸಮೀಪದ ಸರಕಾರಿ ಸಂಯುಕ್ತ ಪ್ರೌಢ ಶಾಲೆ ಮಳಲಿ ಇಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇಲ್ಲಿನ ವಿದ್ಯಾಥರ್ಿಗಳು ನಾನಾ ನಮೂನೆಯ ವೈಜ್ಞಾನಕ ವಸ್ತುಗಳನ್ನು ಕಂಡುಹಿಡಿದು ತಾವೂ ಕೂಡಾ ಯಾವ ವಿಜ್ಞಾನಗಳಿಗೂ ಕಮ್ಮಿ ಇಲ್ಲ ಎಂಬುವುದನ್ನು ಸಾಧಿಸಿ ತೋರಿಸಿದ್ದಾರೆ.
ಗಮನ ಸೆಳೆದ ವೈಜ್ಞಾನಕ ಉಪಕರಣಗಳು:
ತೈಲ ವಿಭಾಜಕ ಯಂತ್ರ:
ಇಲ್ಲಿನ ಪ್ರೌಢ ಶಾಲೆಯ ಮೋಕ್ಷಿತಾ ಎಂಬ ವಿದ್ಯಾಥರ್ಿನ ತೈಲ ವಿಭಾಜಕ ಯಂತ್ರವನ್ನು ಕಂಡು ಹಿಡಿದು ಪ್ರದರ್ಶನಕ್ಕಿಟ್ಟಿದ್ದಳು. ಈಕೆ ಕಂಡು ಹಿಡಿದ ಉಪಕರಂದಿಂದ ನರಿಗೆ ತೈಲ ಮಿಶ್ರಣವಾದರೆ ಸುಲಭವಾಗಿ ಬೇರ್ಪಡಿಸಲು ಸಾಧ್ಯವಿದೆ. ನೀರಿನ ಸಾಂದ್ರೆತೆಗಿಂತ ತೈಲದ ಸಾಂದ್ರತೆ ಕಡಿಮೆ. ಇದರಿಂದಾಗಿಯೇ ತೈಲದಂಥಾ ವಸ್ತುಗಳು ನೀರಿನಲ್ಲಿ ತೇಲುತ್ತದೆ. ನೀರಿನಲ್ಲಿ ಮೋಟಾರನ್ನು ತಿರುಗಿಸಿ ಅವುಗಳಲ್ಲಿ ಕಡಿಮೆ ಸಾಂದ್ರತೆ ಇರುವ ತೈಲವನ್ನು ಸುಲಭವಾಗಿ ಬೇರ್ಪಡಿಸಿ ಸುಲಭವಾಗಿ ನೀರನ್ನು ಶುದ್ದೀಕರಣ ಮಾಡಲು ಸಾಧಗ್ಯವಿದೆ. ಇಲ್ಲಿನ ಶಾಲಾ ವಿದ್ಯಾಥರ್ಿನಿ ಮೋಕ್ಷಿತಾ ಕಂಡು ಹಿಡಿದ ಈ ಉಪಕರಣದಿಂದ ಸುಲಭವಾಗಿ ತೈಲವನ್ನು ವಿಭಜಿಸಿ ತೈಲ ಶುದ್ದೀಕರಣ ಮಾಡಲು ಸಾಧ್ಯವಿದೆ. ಮೋಕ್ಷಿತಾಳ ಪ್ರತಿಭೆಗೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಲಭಿಸಿದೆ.
ಅಪಘಾತ ತಪ್ಪಿಸುವ ರೈಲು ಸಿಗ್ಮಲ್:
ಸಾಮಾನ್ಯವಾಗಿ ರೈಲು ಅಪಘಾತದಲ್ಲಿ ನೂರಾರು ಮಂದಿಯ ಪ್ರಾಣ ಹರಣವಾಗುತ್ತದೆ. ಆದರೆ ಇದನ್ನು ತಪ್ಪಿಸಲೆಂದು ಪುನತ್ ಹಾಗೂ ರಾಜೇಶ್ ಎಂಬಿಬ್ಬರು ವಿದ್ಯಾಥರ್ಿಗಳು ಅಪಘಾತವನ್ನು ತಪ್ಪಿಸಲೆಂದೇ ಉಪಕರಣವೊಂದನ್ನು ಕಂಡುಹಿಡಿದಿದ್ದಾರೆ. ದೂರದಲ್ಲಿ ರೈಲು ಬರುತ್ತಿದ್ದಂತೆ ಅದರ ಚಕ್ರಕ್ಕೆ ತಾಗುವಂತೆ ವಯರನ್ನು ಜೋಡಿಸಲಾಗಿದೆ. ವಯರಿನ ಮೇಲೆ ರೈಲು ಹಾದುಹೋಗುತ್ತಿರುವಂತೆ ಅಲ್ಲಿ ಜ್ವಾಜಲ್ಯಮಾನ ಬೆಳಕು ಉಂಟಾಗುತ್ತದೆ. ಇದರಿಂದಾಗಿ ರೈಲ್ವೆ ಸಿಬ್ಬಂದಿಗೆ ರೈಲು ದೂರದಿಂದಲೇ ಬರುತ್ತಿದ್ದಂತೆ ರೈಲನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಇದೇ ರೀತಿ ಗಣರಾಜ್ಯೋತ್ಸವದ ಅಂಗವಾಗಿ ನಾನಾ ನಮೂನೆಯ ವೈಜ್ಞಾನಿಕ ಉಪಕರಣಗಳನ್ನು ಕಂಡುಹಿಡಿದು ಗಮನ ಸೆಳೆದಿದ್ದಾರೆ. ಸೌರವ್ಯಹ, ಸೂರ್ಯನ ಚಲನೆ, ಕ್ಷೀರಪಥ(ಮಿಲ್ಕ್ ವೇ), ನೀರಾವರಿ, ಹನ ನೀರಾವರಿ, ಏತ ನೀರಾವರಿ, ರಾಕೆಟ್ ಉಡಾವಣೆ, ಬ್ರಹ್ಮಾಂಡದ ಪರಿಚಯ, ನಕ್ಷತ್ರದ ಉಗಮ ಹಾಗೂ ಚಲನೆ, ವಿಶ್ವದ ವಿಕಾಸ, ಸೌರವ್ಯೂಹದ ಪರಿಚಯ, ನರು ಮತ್ತು ಗಾಳಿಯಿಂದ ವಿದ್ಯುತ್ ಪರಿಚಲನೆ, ರಾಸಾಯನಕ ವಸ್ತುಗಳ ಸಂಯೋಗದಿಂದ ವಿದ್ಯುತ್ ಅಲ್ಲದೆ ವಿಜ್ಞಾನಕ್ಕೆ ಪೂರಕವಾಗುವಂತೆ ಹಲವಾರು ವಸ್ತುಗಳನ್ನು ವಿದ್ಯಾಥರ್ಿಗಳು ಕಂಡುಹಿಡಿದಿದ್ದು ಇವುಗಳ ಬಗ್ಗೆ ಬಂದ ಅತಿಥಿಗಳಿಗೆ ವಿದ್ಯಾಥರ್ಿಳೇ ಪರಿಚಯಿಸಿದರು.
ನ್ಯೂಟನ್, ಐನ್ಸ್ಟೀನ್ ತತ್ವಗಳನ್ನು ಸ್ವತಃ ಪ್ರಯೋಗಗಳಿಂದಲೇ ಅರ್ಥ ಮಾಡಿಸಬಲ್ಲ ಸ್ಲೈಡ್ಡ್ಶೋನಂಥಾ ಕಾರ್ಯಕ್ರಮಗಳು ಆಗಮಿಸಿದ ಅತಿಥಿಗಳನ್ನೂ ನಬ್ಬೆರಗಾಗುವಂತೆ ಮಾಡಿತು. ವಿಶ್ವದ ವಿಕಾಸ, ಸೌರವ್ಯೂಹದಲ್ಲಿ ಗ್ರಹಳ ಪರಿಚಲನೆ, ಸೂರ್ಯನ ಪರಿಭ್ರಮಣಾ ಚಲನೆ, ಗ್ರಹಗಳ ಅಕ್ಷಾಂಶ ರೇಖಾಂಶ, ರಾಸಾಯನಕ ಸಂಯೋಗ ಮುಂತಾದುವುಗಳ ಬಗ್ಗೆ ವಿದ್ಯಾಥರ್ಿಗಳು ಪ್ರಾತಕ್ಷಿತೆತೆಯನ್ನು ನಡಿದರು.
ಮಕ್ಕಳಲ್ಲಿ ಪ್ರಾಯೋಗಿಕವಾಗಿ ವಿಜ್ಞಾನದ ಪ್ರಯೋಗಗಳನ್ನು ಹಾಗೂ ವಿದ್ಯಾಥರ್ಿಗಳನ್ನು ವೈಜ್ಞಾನಕವಾಗಿ ಪ್ರೇರೇಪಿಸುವಂತಾಗಲೂ ವೈಕ್ಞಾನಕ ವಸ್ತುಪ್ರದರ್ಶನವನ್ನು ಶಾಲಾ ವಠಾರದಲ್ಲಿ ಇಡಲಾಗಿದೆ. ಮಕ್ಕಳು ಪ್ರಯೋಗ ಸಹಿತವಾಗಿ ವೈಜ್ಞಾನಕ ವಿಚಾರಗಳನ್ನು ಕಲಿಯಲೆಣ ಉದ್ದೇಶದಿಂದಲೇ ವೈಕ್ಞಾನಕ ವಸ್ತು ಪ್ರದರ್ಶನವನ್ನು ಇಡಲಾಗಿದೆ ಎಂದು ಶಾಲಾ ಸರಕಾರಿ ಸಂಯುಕ್ತ ಪ್ರೌಢ ಶಾಲೆ ಮಳಲಿ ಇದರ ಸಹ ಶಿಕ್ಷಕ ಶ್ರೀಪತಿ ಪ್ರತಿಕ್ರಿಯಿಸಿದ್ದಾರೆ.













