ಮಂಗಳೂರು: ಇಲ್ಲಿನ ಪೊಲೀಸ್‌ ಆಯುಕ್ತರ ಕಚೇರಿಗೆ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ಮಂಗಳವಾರ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ವೇಳೆ ಲಾಠಿ ಚಾರ್ಜ್‌ ನಡೆದ ಘಟನೆ ನಡೆದಿದೆ.ಹಿಂದೂ ಪರ ಸಂಘಟನೆಯ ನಾಯಕರ ಹತ್ಯೆಗೆ ಸಂಬಂಧಿಸಿ ಸಂಘಟನೆಯ ಕಾರ್ಯಕರ್ತನನ್ನು ಬಂಧಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆದಿದ್ದು, ಈ ವೇಳೆ ಬಸ್‌ಗಳ ಮೇಲೂ ಕಲ್ಲು ತೂರಾಟ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ನೂರಾರು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಹಿಗ್ಗಾಮುಗ್ಗಾ ಲಾಠಿ ಬೀಸಿದ್ದಾರೆ.ಲಾಠಿ ಏಟಿನಿಂದ ಹಲವರು ಗಾಯಗೊಂಡಿದ್ದು , ಓರ್ವ ಪಿಎಫ್ಐ ಕಾರ್ಯಕರ್ತನ ತಲೆಗೆ ಗಂಭೀರ ಗಾಯವಾಗಿ ತೀವ್ರ ಸ್ವರೂಪದಲ್ಲಿ ರಕ್ತಸ್ರಾವವಾಗಿದೆ. ಗಾಯಾಳುಗಳಿಗೆ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

IMG-20170404-WA0007

IMG-20170404-WA0008

IMG-20170404-WA0009
7 ಮಂದಿ ಪೊಲೀಸ್‌ ಸಿಬಂದಿಯೂ ಗಾಯಗೊಂಡಿರುವುದಾಗಿ ಆಯುಕ್ತ ಚಂದ್ರಶೇಖರ್‌ ಅವರು ತಿಳಿಸಿದ್ದಾರೆ.

ಮುತ್ತಿಗೆ ಹಾಕಲು ಯತ್ನಿಸಿದ 60 ಮಂದಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

By suddi9

Leave a Reply

Your email address will not be published. Required fields are marked *