ಮಂಗಳೂರು : ಸುನ್ನೀಸಂದೇಶ ಮಾಸ ಪತ್ರಿಕೆ ವತಿಯಿಂದ ಇಂದು ಕಂಕನಾಡಿಯ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಹಾಲ್‍ನಲ್ಲಿ ನಡೆದ ಮಜ್ಲಿಸುನ್ನೂರು ಕಾರ್ಯಕ್ರಮ ಹಾಗೂ ಜಲದಾನ ಮಹಾದಾನ ಅಭಿಯಾನ ಮತ್ತು ನೌಶಾದ್ ಬಾಖವಿಯ ನೆಹರೂ ಮೈದಾನ ಕಾರ್ಯಕ್ರಮದ ಡಿವಿಡಿ ಹಾಗೂ ಪ್ರೋಗ್ರಾಂ ಆಲ್ಬಂ ಹಾಗೂ ತಿರುವನಂತಪುರಂ ಸಮಸ್ತ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನೌಶಾದ್ ಬಾಖಿವಯವರಿಗೆ ಸನ್ಮಾನ ಹಾಗೂ ಸಮಸ್ತದ ನೈಜ ಸಂದೇಶವನ್ನು ತಿಳಿದು ಸಮಸ್ತದೊಂದಿಗೆ ಕೈ ಜೋಡಿಸಿದ ಆರೂನ್ ಹಸನಿ ಕಿನ್ಯ ಹಾಗೂ ಝೈನಿ ಖಾಮಿಲ್ ಸಖಾಫಿ ಉಳ್ಳಾಲರವರಿಗೆ ನೌಶಾದ್ ಬಾಖವಿ ಮತ್ತು ಹಸನ್ ಸಖಾಫಿ ಪೂಕೋಟೂರ್ ಸಮಸ್ತದ ಪತಾಕೆಯನ್ನು ನೀಡುವ ಕಾರ್ಯಕ್ರಮವು ನಡೆಯಿತು. ದ.ಕ. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಂ ಅಧ್ಯಕ್ಷರಾದ ಕೆ. ಎಲ್. ಉಮರ್ ದಾರಿಮಿರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಮಸ್ತ ಕರ್ನಾಟಕ ಮುಶಾವರ ಸದಸ್ಯರಾದ ಕೆ. ಎಂ. ಖಾಸಿಂ ದಾರಿಮಿ ಕಿನ್ಯ ಉದ್ಘಾಟಿಸಿದರು. ಸಮಸ್ತ ಕರ್ನಾಟಕ ಮುಶಾವರ ಕಾರ್ಯದರ್ಶಿ ಬಿ. ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಮಜ್ಲಿಸುನ್ನೂರ್‍ಗೆ ನೇತೃತ್ವ ನೀಡಿದರು.

bty

btyದಾರುಸ್ಸಲಾಂ ಅಕಾಡಮಿಯ ಅಧ್ಯಕ್ಷ ಸಯ್ಯಿದ್ ಅಮೀರ್ ತಂಙಳ್ ದುಆ ಆಶೀರ್ವಚನ ನೀಡಿದರು. ಮಜ್ಲಿಸುನ್ನೂರ್ ಕೇಂದ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಹಸನ್ ಸಖಾಫಿ ಪೂಕೋಟೂರ್ ಮಜ್ಲಿಸುನ್ನೂರ್ ಮಹತ್ವದ ಕುರಿತು ಪ್ರಭಾಷಣ ಮಾಡಿದರು. ಸುನ್ನೀ ಸಂದೇಶ ಪತ್ರಿಕೆ ಮೂಲಕ ಇಸ್ಲಾಮಿನ ಸಂದೇಶ ಸರ್ವರಿಗೂ ತಲುಪಲಿ ಎಂದು ಹೇಳುವ ಮೂಲಕ ಅಂತರಾಷ್ಟ್ರೀಯ ಪ್ರಭಾಷಣಗಾರ ಎ. ಎಂ. ನೌಶಾದ್ ಬಾಖವಿ ಮುಖ್ಯಪ್ರಭಾಷಣ ನೀಡಿದರು. ಕಾರ್ಯಕ್ರಮದಲ್ಲಿ ವಿಶ್ವಾಸ್ ಬಿಲ್ಡರ್ಸ್‍ನ ಅಬ್ದುಲ್‍ರರವೂಫ್ ಪುತ್ತಿಗೆ, ಸೆಂಟ್ರಲ್ ಕಮಿಟಿ ದ.ಕ. ಉಡುಪಿ ಉಪಾಧ್ಯಕ್ಷ ಮುಮ್ತಾಜ್ ಅಲಿ ಕೃಷ್ಣಾಪುರ, ಕೋಟೆಕಾರ್ ಮುದರ್ರಿಸ್ ಆರುನ್ ಹಸನಿ ಕಿನ್ಯ, ಅಫೀಝ್ ಝೈನ್ ಸಖಾಫಿ ಉಳ್ಳಾಲ, ಮಾಜಿ ಮೇಯರ್ ಅಶ್ರಫ್ ಕೆ., ಸಿತಾರ್ ಅಬ್ದುಲ್ ಮಜೀದ್ ಹಾಜಿ, ಹಕೀಂ ವಿಟ್ಲ ಪರ್ತಿಪ್ಪಾಡಿ, ಸುನ್ನೀ ಸಂದೇಶ ಡೈರಕ್ಟರ್ ಎ. ಎಚ್. ನೌಶಾದ್ ಹಾಜಿ ಸೂರಲ್ಪಾಡಿ, ಅಬ್ದುಲ್ಲಾ ಹಾಜಿ ಬೆಳ್ಮ, ಎಸ್‍ವೈಎಸ್ ದ.ಕ. ಜಿಲ್ಲಾ ಪ್ರಧಾನಕಾರ್ಯದರ್ಶಿ ಅಬ್ದುಲ್ಲತೀಫ್ ಹಾಜಿ ಮದರ್‍ಇಂಡಿಯಾ, ಮದ್ರಸಾ ಮೇನೇಜ್‍ಮೆಂಟ್ ದ.ಕ. ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಹಕೀಂ ಪರ್ತಿಪ್ಪಾಡಿ, ಅಬ್ಬಾಸ್ ಹಾಜಿ ಆನೆಕಲ್ಲಿ, ಹಸನ್ ಬೆಂಗರೆ, ಯೂಸುಫ್ ಕಿನ್ಯ, ಉಮರ್ ಹಾಜಿ ಬೆಂಗರೆ, ಟ್ಯಾಲೆಂಟ್ ಫೌಂಡೇಶನ್ ಅಧ್ಯಕ್ಷ ರಿಯಾಝ್ ಕಣ್ಣೂರ್, ರಫೀಕ್ ಮಾಸ್ಟರ್ ಟಿಆರ್‍ಎಫ್, ಹಮೀದ್ ಕಣ್ಣೂರ್, ಬಶೀರ್ ಹಿರಾ, ಇಕ್ಬಾಲ್ ಬಾಳಿಲ, ಉನೈಸ್ ಪೆರಾಜೆ, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಸಾವುಲ್ ಹಮೀದ್ ಸುಳ್ಯ, ಬಶೀರ್ ಮುಲ್ಕಿ, ಅಸ್‍ಫರ್ ಬೆಂಗರೆ, ರಫೀಕ್ ಅಜ್ಜಾವರ, ಇಸ್ಮಾಯಿಲ್ ಬೆಂಗರೆ, ಮೊೈದ್ದಿನ್ ಬೆಂಗರೆ, ಅಶ್ರಫ್ ಅಲ್ಸನಿ ಅಲ್ ಅಫ್‍ನರಿ ಕಿನ್ಯ, ಇಬ್ರಾಹಿಂ ಖಲೀಲ್ ಅಮ್ಜದಿ ಬೆಳ್ಮ, ಜುನೈದ್ ಮುಸ್ಲಿಯಾರ್ ಉಳ್ಳಾಲ, ಬಶೀರ್ ಉಚ್ಚಿಲ, ಮುಹಮ್ಮದ್ ಕೊಣಾಜೆ, ಫಕ್ರುದ್ದೀನ್ ಮಂಗಳೂರು, ರಶೀದ್ ಮಾಣಿ, ಅಬ್ದುಸಮದ್ ಅರಳ, ಮುಸ್ತಫ ಫೈಝಿ ಕಿನ್ಯ, ಲೆತೀಫ್ ದಾರಿಮಿ ರೆಂಜಾಡಿ, ಅಬೂಸ್ವಾಲಿ ಫೈಝಿ ಪಾಣೆಮಂಗಳೂರು, ಅಝೀಝ್ ಫೈಝಿ ಪಟ್ಟೋರಿ, ಸಿರಾಜುದ್ದೀನ್ ಮೂಡಗೆರೆ, ಫಿಶ್ ಅಹಮ್ಮದ್ ಮೋನು ಮೂಡಗೆರೆ ಮೊದಲಾದವರು ಉಪಸ್ಥಿತರಿದ್ದರು. ಮೊದಲಿಗೆ ಮುಸ್ತಫ ಫೈಝಿ ಸ್ವಾಗತಿಸಿ ಕೊನೆಗೆ ವಂದಿಸಿದರು.

By suddi9

Leave a Reply

Your email address will not be published. Required fields are marked *