Bysuddi9

Jul 12, 2014

ಸುದ್ದಿ9 ಕೈಕಂಬ: ಗುರುಪುರ ಕೈಕಂಬದ ಪೊಳಲಿ ದ್ವಾರದಿಂದ ಬಿ.ಸಿರೋಡಿನ ಕೈಕಂಬದ ದ್ವಾರದವರೆಗೆ ಸುಮಾರು 16 ಕಿ,ಮೀ ಸ್ವಾಮಿ ವಿವೇಕನಂದರ ಹೆಸರು ಅಧಿಕೃತಗೊಂಡಿತು . ಈ ರಸ್ತೆಗೆ ಸ್ವಾಮಿ ವಿವೇಕಾನಂದರ ಹೆಸರನ್ನು ಇಡಬೇಕೆಂದು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿಯವರು ಕಳೆದ ಮೂರು ವರ್ಷಗಳ ಕಾಲ ಅವಿಶ್ರಾಂತವಾಗಿ ದುಡಿದಿದ್ದರು. ಅವರ ತಪಸ್ಸಿನ ಫಲವಾಗಿ (ಜು.12) ಶನಿವಾರ ಗಣ್ಯರ ಸಮ್ಮುಖದಲ್ಲಿ ಈ ರಸ್ತೆಗೆ ಸ್ವಾಮಿ ವಿವೇಕಾನಂದರ ಹೆಸರನ್ನು ಇಡಲಾಯ್ತು. ಮಂಗಳೂರು ಮತ್ತು ಬಂಟ್ವಾಳ ತಾಲೂಕಿಗೆ ಒಳಪಟ್ಟ 4 ಜಿಲ್ಲಾ ಪಂಚಾಯತ್ ಕ್ಷೇತ್ರ, 5 ತಾಲುಕು ಪಂಚಾಯತ್ ಕ್ಷೇತ್ರಕೊಳಪಟ್ಟ , 6 ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಈರಸ್ತೆಗೆ ವಿವೇಕಾನಂದರ ಹೆಸರು ಬರಲು ಆರಂಭದಿಂದಲೂ ಅನೇಕ ವಿಘ್ನಗಳನ್ನು ಎದುರಿಸಿದ್ದು . ಕೆಲವರು ಈ ರಸ್ತೆಗೆ ವಿವೇಕಾನಂದರ ಹೆಸರನ್ನು ಇಡಬಾರದೆಂದು ಗುಪ್ತವಾಗಿ ಅನೇಕ ಅಡ್ಡಿಯನ್ನುಂಟು ಮಾಡಿದ್ದರು. ಆದರೆ ಇವೆಲ್ಲಾ ಅಡ್ಡಿ ಆತಂಕಗಳನ್ನು ನಿವಾರಿಸಿ ಪ್ರತಿಯೊಂದು ವರ್ಗದ, ಸಮುದಾಯದವರ ವಿಶ್ವಾಸವನ್ನು ಗಳಿಸಿದ್ದರ ಫಲವಾಗಿ ಈ ರಸ್ತೆಗೆ ಈ ಹೆಸರು ಬಂತು. `ಸ್ವಾಮಿ ವಿವೇಕಾನಂದ ರಸ್ತೆ’ ವಿವೇಕನಂದ ರಸ್ತೆಯನ್ನು ಜಿಲ್ಲಾ ಉಸ್ತುವರಿ ಸಚಿವರಾದ ರಮಾನಾಥ ರೈ ಅವರು ಉದ್ಘಾಟಿಸಿದರು. ವಿವೇಕಾನಂದ ಸರ್ಕಲ್ . ಬಿಸಿರೋಡು-ಮಂಗಳೂರು-ಮೂಡಬಿದ್ರೆ ಈ ಮೂರು ರಸ್ತೆಗಳನ್ನು ಜೋಡಿಸುವುದು ಇದೇ ಜಾಗದ ಗುರುಪುರ ಕೈಕಂಬದ ಪೊಳಲಿ ದ್ವಾರದ ಸಮೀಪ. ಇಲ್ಲಿ ಒಂದು ವೃತ್ತ(ಸರ್ಕಲ್) ರಚಿಸಲಾಗಿದ್ದು, ಇದಕ್ಕೆ ವಿವೇಕಾನಂದ ಸರ್ಕಲ್ ಎಂದು ಹೆಸರಿಡಲಾಯ್ತು. ವಿವೇಕನಂದ ವೃತ್ತವನ್ನು ರಾಜೇಶ್ ನಾಕ್ ಉಳಿಪಾಡಿಗುತ್ತು ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದ ಪ್ರಯಾಣಿಕರ ತಂಗುದಾಣ. ಈ ರಸ್ತೆಯಲ್ಲಿ ಪೊಳಲಿ ಬಿ.ಸಿರೋಡಿಗೆ ಹೋಗುವ ಪ್ರಯಾಣಿಕರಿಗೆ ಈ ಕೊರತೆಯನ್ನು ನೀಗಿಸಲು ಬಸ್ಸ್ಟ್ಯಾಂಡ್ ನಿಮರ್ಿಸುವ ಮೂಲಕ ಸ್ವಾಮಿ ವಿವೇಕಾನಂದ ಪ್ರಯಾಣಿಕರ ತಂಗುದಾಣವನ್ನು ಸ್ವಾಮಿ ಜಿತಕಾಮಾನಂದಜೀ ಮಹರಾಜ್ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಡಿ. ಚಂದ್ರಶೇಖರ ಭಂಡಾರಿ ವಹಿಸಿದ್ದರು. ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮೊಕ್ತೇಸರ ಯು. ತಾರಾನಾಥ ಆಳ್ವ , ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಸ್ವಾಮಿ ಆಶೀರ್ವಚನ ನೀಡಿದರು. ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಚೈತನ್ಯಾನಂದ ಅಟವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಮೀ ವಿವೇಕಾನಂದರು ದೇಶ ಕಂಡ ಮಹಾನ್ ಸಂತ. ದೇಶ ಆಂಗ್ಲರ ಕಪಿಮುಷ್ಠಿಯಲ್ಲಿದ್ದಾಗಲೂ, ದೇಶದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಸಾರಿ ವಿಶ್ವ ಸಂತ ರೆನಿಸಿದ್ದಾರೆ. ತನ್ನ ಅಲ್ಪಾವಧಿಯ ಜೀವಿತಾವಧಿಯಲ್ಲಿ ಆಧ್ಯಾತ್ಮವನ್ನು ಸಾರಿ ಇಡೀ ಜಗತ್ತಲ್ಲಿ ಶಾಂತಿ ನೆಲೆಗೊಳ್ಳಬೇಕೆಂದು ಪ್ರಯತ್ನಿಸಿದ್ದರು. ಇಂಥ ಮಹಾನ್ ಪುರುಷರ ಹೆಸರಿನ ವ್ಯಕ್ತಿಯ ಕೆತ್ತನೆಗಳು, ಹೆಸರುಗಳು, ಆಚರಣೆಗಳು ಆ ಜಾಗದಲ್ಲಿ ಆ ವ್ಯಕ್ತಿಗಳ ಚೈತನ್ಯವನ್ನು ಪಸರಿಸುತ್ತದೆ. ಇದೇ ದಿವ್ಯ ದೃಷ್ಟಿಯನ್ನು ಮುಂದಿಟ್ಟುಕೊಂಡು ಈ ರಸ್ತೆಗೆ ಅಧಿಕೃತವಾಗಿ ಗಣ್ಯರ ಹಾಗೂ ಸ್ವಾಮೀಜಿಗಳ ಸಮ್ಮುಖದಲ್ಲಿ `ಸ್ವಾಮಿ ವಿವೇಕಾನಂದ ರಸ್ತೆ’ ಎಂಬ ಹೆಸರನ್ನಿಡಲಾಯ್ತು ಎಂದರು. ಜಿಲ್ಲಾ ಪಂಚಾಯತ್ ಸದಸ್ಯೆಯರಾದ ಯಶವಂತಿ ಆಳ್ವ, ನಳಿನಿ ಶೆಟ್ಟಿ, ಜಯಶ್ರೀ ಕೆ.ಎ, ತಾಲೂಕು ಪಂಚಾಯತ್ ಸದಸ್ಯೆರಾದ ವಿಜಯಲಕ್ಷ್ಮೀ ಶೆಟ್ಟಿ, ಗುಣವತಿಕೆ.ಎಪ್ರೇಮ್ ಸಿಕ್ವೇರಾ , ಸೆಲಿನ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಬಿತಾ ಕೊಟ್ಯಾನ್, ವೇದಾವತಿ, ಪುಂಡಲೀಕ ಕಾಮತ್ ಉಪಸ್ಥಿತರಿದ್ದರು. ಹಿಂದೂ ಜಾಗರಣ ವೇದಿಕೆ ಸಂಚಾಲಕ ಸತ್ಯಜಿತ್ ಸುರತ್ಕಲ್, ಬಜರಂಗದಳದ ಸಂಚಾಲಕ ಭುಜಂಗ ಕುಲಾಲ್, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಪ್ರತ್ವಿರಾಜ್ ಶೆಟ್ಟಿ , ಕೆಯ್ಯೂರು ನಾರಾಯಣ ಭಟ್, ಜಯರಾಮಕೃಷ್ಣ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು. ರಾಮಚಂದ್ರರಾವ್ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ್ ನಾವಡ ದನ್ಯವಾದವಿತ್ತರು.

By suddi9

Leave a Reply

Your email address will not be published. Required fields are marked *