ಮಂಗಳೂರು: ಜೀರ್ಣೋದ್ಧಾರಗೊಳ್ಳುತ್ತಿರುವ ಮಾಮೇಶ್ವರದ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಮಂಗಳೂರಿನಲ್ಲಿ ಅಡಿಕೆ ವ್ಯಾಪಾರಸ್ಥರಾಗಿರುವ ಗುಜರಾತಿನ ಯುದಿಷ್ಠಿರ ಮತ್ತು ಕುಟುಂಬಸ್ತರು 1 ಲಕ್ಷರೂಪಾಯಿ ದೇಣಿಗೆಯನ್ನು ಗೌರವಾಧ್ಯಕ್ಷರಾದ ಕೋಂಕೋಡಿ ಪದ್ಮನಾಭ ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಕಪ್ಪ ಗೌಡ, ವೀರಪ್ಪ ಗೌಡ, ಡೊಂಬಯ್ಯ ಗೌಡ, ರಾಘವ ಅಡ್ಡಾಳಿ, ದಿನೇಶ್, ಸಂಜೀವ ಪೂಜಾರಿ, ವಿಶ್ವನಾಥ ನಾಯ್ತೊಟ್ಟು, ಹರೀಶ ಎಸ್ ಪಿ, ಪಟ್ಟಣ ಪಂಚಾಯತ್ ಸದಸ್ಯೆ ಇಂದಿರಾ ಅಡ್ಡಾಳಿ, ಮೋನಪ್ಪ ಗೌಡ, ರಾಮಣ್ಣ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.

