ಬೆಂಗಳೂರು: ಈ ಬಾರಿಯ ಬಿಗ್ ಬಾಸ್’ನಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಪ್ರಥಮ್ ಅವರೇ ಗೆಲುವು ಸಾಧಿಸಿದ್ದಾರೆ. ಕೀರ್ತಿ ಮೊದಲ ರನ್ನರ್ ಅಪ್ ಆದರೆ ರೇಖಾ 2 ನೇ ರನ್ನರ್ ಅಪ್ ಆಗಿದ್ದಾರೆ. ಪ್ರಥಮ್ ಬಿಗ್ ಬಾಸ್ ನಾಲ್ಕನೇ ಸೀಸನ್’ನ ವಿನ್ನರ್ ಆಗಿದ್ದಾರೆ. ಫಿನಾಲೆಗೆ ಏರಿದ ಪ್ರಥಮ್, ರೇಖಾ, ಕೀರ್ತಿಕುಮಾರ್, ಮೋಹನ್ ಮತ್ತು ಮಾಳವಿಕಾ ಪೈಕಿ ಪ್ರಥಮ್ ಅತೀ ಹೆಚ್ಚು ವೋಟ್ ಗಳಿಸಿದ ಆಧಾರದ ಮೇಲೆ ಅಗ್ರಸ್ಥಾನ ಪಡೆದಿದ್ದಾರೆ.. ಪ್ರಥಮ್’ಗೆ ರೇಖಾ ಮತ್ತು ಕೀರ್ತಿ ನಿಕಟ ಪೈಪೋಟಿ ನೀಡಿದ್ದರು. ಕೊನೆ ಕ್ಷಣದಲ್ಲಿ ಫಲಿತಾಂಶ ಕೀರ್ತಿ ಪರ ವಾಲಬಹುದೆನ್ನಲಾಗಿತ್ತು. ಆದ್ರೆ ಒಳ್ಳೆ ಹುಡುಗ ಪ್ರಥಮ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

p

ಮೊದಲ ರನ್ನರ್ ಅಪ್ ಆದ ಕೀರ್ತಿಗೆ ನಟ ಸುದೀಪ್ ತಮ್ಮ ಕಡೆಯಿಂದ ರೂ. 10 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ. ಹಾಗೂ ಪ್ರಥಮ್ ತಾವು ಗೆದ್ದ 50 ಲಕ್ಷ ರೂ ಹಣವನ್ನು , ಹಳ್ಳಿಗಳ ಉದ್ದಾರಕ್ಕೆ , ಸೈನಿಕರಿಗೆ ಮತ್ತು ರೈತರಿಗೆ ನೀಡುವುದಾಗಿ ಹೇಳಿದ್ದಾರೆ. ಇದು ಪ್ರಥಮ್ ತಂದೆಯವರ ಆಶಯವೂ ಆಗಿತ್ತು.

ಪ್ರಥಮ್ ಅವರ ಮಾತುಗಳು ಸಹ ಸ್ಪರ್ಧಿಗಳನೇಕರಿಗೆ ತೀರಾ ಕಿರಿಕಿರಿ ಎನಿಸಿದರೂ ವೀಕ್ಷಕರಿಗೆ ಅವರು ನೇರ ನಡೆನುಡಿಯವರೆನಿಸಿದ್ದಾರೆ. ಇನ್ನು, ರೇಖಾ ಅವರನ್ನು ಸ್ವೀಟ್ ರೇಖಾ ಎಂದೇ ಅಭಿಮಾನಿಗಳು ಸಂಬೋಧಿಸುತ್ತಾರೆ. ಟಾಸ್ಕ್ ಗಳಲ್ಲಿ ಕೀರ್ತಿಯಾದೆ ಮೇಲುಗೈ ಆಗಿದ್ದರಿಂದ ಅವರೇ ವಿನ್ನರ್ ಆಗುತ್ತಾರೆ ಎನ್ನಲಾಗಿತ್ತು.

5 ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದರು. ಅದರಲ್ಲಿ 3 ಸಾವಿರಕ್ಕೂ ಮೇಲ್ಪಟ್ಟು ಓದುಗರು ಪ್ರಥಮ್ ಗೆಲ್ಲುವುದಾಗಿ ತಿಳಿಸಿದ್ದರು. ಉಳಿದ ಹೆಚ್ಚು ಅಭಿಪ್ರಾಯಗಳು ರೇಖಾ, ಕೀರ್ತಿಕುಮಾರ್ ಪರವಾಗಿ ಬಂದಿದ್ದವು. ಪ್ರಥಮ್, ರೇಖಾ, ಕೀರ್ತಿಕುಮಾರ್, ಮೋಹನ್ ಮತ್ತು ಮಾಳವಿಕಾ ಫಿನಾಲೆಯ ಫೈನಲ್’ವರೆಗೂ ತಲುಪಿದ್ದರು. ಪ್ರಥಮ್ ಮಾತುಗಳು ಸಹ ಅನೇಕ ಸ್ಪರ್ಧಿಗಳಿಗೆ ತೀರಾ ಕಿರಿಕಿರಿ ಎನಿಸಿದರೂ ವೀಕ್ಷಕರಿಗೆ ಮೆಚ್ಚುಗೆಯಾಗಿದ್ದರು.

ಇನ್ನು ರೇಖಾ ಅವರು ಬಿಗ್’ಬಾಸ್ ಮನೆಯಲ್ಲಿ ಫುಲ್ ಸೈಲೆಂಟ್. ಎಲ್ಲ ಟಾಸ್ಕ್’ಗಳಲ್ಲೂ ಉತ್ತಮವಾಗಿ ಆಟವಾಡಿದ್ದ ಕೀರ್ತಿ ಪ್ರಬಲ ಸ್ಪರ್ಧಿಯಾಗಿದ್ದರು. ಬಿಗ್’ಬಾಸ್ ಶೋನಲ್ಲಿ ಯಾರಿಗೂ ಕಿರಿಕಿರಿ ಉಂಟು ಮಾಡದೆ ಜಾಣ್ಮೆಯಿಂದ ಆಟವಾಡಿದ ಇವರು ಬಿಗ್’ಬಾಸ್’ನಲ್ಲಿ ವಿಜೇತರಾದರೆ ಶೋ’ಗೆ ನಿಜವಾದ ಗೌರವ ಎಂಬ ಅಭಿಪ್ರಾಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಗಿದ್ದವು. ಬಿಗ್’ಬಾಸ್’ನ ಅನೇಕ ಮಾಜಿ ಕಂಟೆಸ್ಟೆಂಟ್’ಗಳೂ ಕೂಡ ಪ್ರಥಮ್ ಮತ್ತು ರೇಖಾಗೆ ಹೆಚ್ಚು ಒಲವು ವ್ಯಕ್ತಪಡಿಸಿದ್ದು ಗಮನಾರ್ಹ.

ಹಿಂದಿನ ಬಿಗ್’ಬಾಸ್ ವಿನ್ನರ್ಸ್:

ಸೀಸನ್ 1: ವಿಜಯ ರಾಘವೇಂದ್ರ
ಸೀಸನ್ 2: ಅಕುಲ್ ಬಾಲಾಜಿ
ಸೀಸನ್ 3: ಶೃತಿ

By suddi9

Leave a Reply

Your email address will not be published. Required fields are marked *