ಮಂಗಳೂರು: ಗುರುಪುರ ಗೋಳಿದಡಿಗುತ್ತಿನ ಗುತ್ತುದ “ವರ್ಸೊದ ಪರ್ಬೊ” ದ ಪ್ರಯುಕ್ತ ಶ್ರೀ ವೈದನಾಥೇಶ್ವರ ವೇದಿಕೆಯಲ್ಲಿ ಸಂಜೆ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ಶ್ರೀಗುರು ಸಾನಿಧ್ಯದಲ್ಲಿ ಚಿಕ್ಕಮಂಗಳೂರು ವೇದವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದರು ಮತ್ತು ಗುರುಪುರ ಮುಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದ ತಂತ್ರಿ ಜಿ.ಟಿ.ಅಣ್ಣು ಭಟ್, ಸುಮತಿ ನಿತ್ಯಾನಂದ ಮತ್ತು ಸಾವಿತ್ರಿ ದಿವಾಕರ ಭಟ್ ದೀಪ ಬೆಳಗಿಸಿದರು.
ಕೆಲರೈ ಪ್ರೆಸಿಡೆನ್ಸಿ ಸ್ಕೂಲ್‍ನ ಶಿಕ್ಷಕಿ ಅನಿತಾ ದಾಸ್ ಪ್ರವೀಣ್ ದಿಕ್ಸೂಚಿ ಮಾತನಾಡಿದರು. ಸರೋಜಿನಿ ಮಹೇಶ್ ಶೆಟ್ಟಿ, ಶಕಿಲಾ ಕಾವ, ಮರಿಯಾ ಲವೀನ ಎಸ್. ವೇಗಸ್, ಉಡುಪಿ ಜಿಲ್ಲಾ ಆರೆಸ್ಸೆಸ್ ಪ್ರಮುಖ ಶಂಭು ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಉಷಾ ವರ್ಧಮಾನ ಡಿ. ಶೆಟ್ಟಿ ಪ್ರಸ್ತಾವನೆಗೈದರು. ಚಂದ್ರಶೇಖರ್ ವಾಮಂಜೂರು ವಂದಿಸಿದರು. ಪೆರಾರ ಶ್ರೀ ಬಲವಂಡಿ ಮುಕ್ಕಾಲ್ದ ಅಳಕೆಗುತ್ತು ಬಾಲಕೃಷ್ಣ ಶೆಟ್ಟಿ ಅವರು ನಿರೂಪಿಸಿದರು. ಗುರುಪುರ ಗೋಳಿದಡಿಗುತ್ತಿನ ಗಡಿಕಾರರು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಕಾರ್ಯಕ್ರಮದ ನೇತೃತ್ವ ವಹಿಸಿದರು.

