ಮೂಡುಬಿದಿರೆ: ಉಪಯೋಗಕ್ಕೆ ಅರ್ಹವಲ್ಲವೆಂದು ನಿಷೇಧಿಸಿರುವ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದ ಕೆಲವು ಅಂಗಡಿ ಹೊಟೇಲ್‍ಗಳಿಗೆ ಮೂಡುಬಿದಿರೆ ಪುರಸಭಾಧಿಕಾರಿಗಳು ದಾಳಿ ನಡೆಸಿ 28 ಕೆ.ಜಿ ಪ್ಲಾಸ್ಟಿಕ್‍ಗಳನ್ನು ಸಂಗ್ರಹಿಸಿದ್ದಾರೆ.
ಆಳ್ವಾಸ್ ಆಸ್ಪತ್ರೆ ಬಳಿಯ ರಸ್ತೆ, ಮಾರ್ಕೆಟ್ ಕಾಂಪ್ಲೆಕ್ಸ್, ಜಿ.ವಿ.ಪೈ ಆಸ್ಪತ್ರೆ ರಸ್ತೆ ಬಳಿ ಹಾಗೂ ಮೂಡುಬಿದಿರೆ ಬಸ್ ನಿಲ್ದಾಣದ ಬಳಿಯಲ್ಲಿರುವ ಅಂಗಡಿಗಳಿಗೆ ದಾಳಿ ನಡೆಸಲಾಗಿದೆ. ಈ ಸಂದರ್ಭ ಪರಿಸರ ಅಭಯಂತರರಾದ ಶಿಲ್ಪಾ, ಪುರಸಭಾ ಕಾರ್ಯಾಲಯದ ವ್ಯವಸ್ಥಾಪಕ ಸೂರ್ಯಕಾಂತ ಖಾರ್ವಿ, ಸಿಬಂದಿಗಳಾದ ಮಂಜುನಾಥ್, ಸುದೇಶ್ ಹೆಗ್ಡೆ ಉಪಸ್ಥಿತರಿದ್ದರು.

