ಮಂಗಳೂರು: ಶ್ರೀ ಸದಾಶಿವ ದೇವಸ್ಥಾನ ಪೆರ್ಮಂಕಿ ಇಲ್ಲಿ ದಿನಾಂಕ 01-03-2017ರಿಂದ 06-03-2017ರ ವರೆಗೆ ಜರಗುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದ ಜರಗುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ದೇವಸ್ಥಾನದ ವಠಾರದಲ್ಲಿ ಜರುಗಿತು. ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಶ್ರೀ ವಿವೇಕ ಚೈತನ್ಯಾನಂದ ಸ್ವಾಮಿಗಳು, ರಾಮಕೃಷ್ಣ ಆಶ್ರಮ, ಪೊಳಲಿ ಇವರ ದಿವ್ಯ ಹಸ್ತದಿಂದ ಬಿಡುಗಡೆಗೊಳಿಸಲಾಯಿತು.
ಖ್ಯಾತ ವಾಸ್ತುಶಿಲ್ಪ ತಜ್ಞ ಕೃಷ್ಣರಾಜ ತಂತ್ರಿ ಕುಡುಪು ಇವರು ಆಶೀರ್ವಚನ ಭಾಷಣವನ್ನು ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪದ್ಮನಾಭ ಶೆಟ್ಟಿ ಪೆರ್ಮಂಕಿಗುತ್ತು ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ರವೀಂದ್ರನಾಥ ಮಾರ್ಲ ಪೆರ್ಮಂಕಿ, ಗೌರವಾಧ್ಯಕ್ಷರಾದ ನಿಟ್ಟೆಗುತ್ತು ಯತಿರಾಜ್ ಶೆಟ್ಟಿ, ಉದ್ಯಮಿ ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಪದ್ಮನಾಭ ಕೋಟ್ಯಾನ್, ವಿನಯ ಕುಮಾರ್ ಶೆಟ್ಟಿ ಮಾಣಿಬೆಟ್ಟುಗುತ್ತು, ಶ್ರೀನಿವಾಸ ಮಾಣೈ ಸಾಲೆ, ಆನಂದ ಶೆಟ್ಟಿ, ಗಂಗಾಧರ್ ಟೀಚರ್, ದೇವಪ್ಪ ಅಮೀನ್, ಉಮಾನಾಥ್ ಬೆಳ್ಚಡ, ವಿಠಲ ಶೆಟ್ಟಿ, ವಾಸುದೇವ ಮೂಲ್ಯಉಪಸ್ಥಿತರಿದ್ದರು. ರಾಜೀವ ಶೆಟ್ಟಿ ಸಲ್ಲಾಜೆ ಸ್ವಾಗತಿಸಿದರು. ಸುದರ್ಶನ್ ಶೆಟ್ಟಿ ಪೆರ್ಮಂಕಿ ಪ್ರಾಸ್ತಾವನೆ ಗೈದರು.ಲೋಕೇಶ್ ಮಾಡ ವಂದಿಸಿದರು.

