ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಡಂಬು ನಾರಾಯಣ ಬನ್ನಿಂತಾಯರ ಮಗ, ರಾಮಚಂದ್ರ ಬನ್ನಿಂತಾಯ (63) ಜ.02ರಂದು ಬೆಳಿಗ್ಗೆ ಹೃದಯಾಘಾತದಿಂದ, ಸ್ವಗೃಹದಲ್ಲಿ ನಿಧನ ಹೊಂದಿದರು.

ಇವರು ನಿವೃತ್ತ ಆಹಾರ ನಿರೀಕ್ಷಕ, ಸಾಮಾಜಿಕ ಕಾರ್ಯಕರ್ತ, ಕಡಂಬು ಶ್ರೀ ಮಾಗಂದಡಿ ಮಲರಾಯ ಸೇವಾ ಟ್ರಸ್ಟ್‍ನ ಅಧ್ಯಕ್ಷರಾಗಿದ್ದರು. ಇವರು ತಾಯಿ, ಪತ್ನಿ, ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
