ಜೀವನದ ಪ್ರತಿ ಸೋಲು ಯಶ್ವಸಿನ ಮೆಟ್ಟಿಲು- ಶ್ರೀಮತಿ ಕವಿತಾ ಸನಿಲ್

ವಾಮಂಜೂರು- ಜೀವನದಲ್ಲಿ ಸೋಲನ್ನು ಸೋಲೆಂದು ಸ್ವೀಕರಿಸದೇ ಅದನ್ನು ಸವಲಾಗಿ ಸ್ವೀಕರಿಸಿಕೊಂಡು ಮತ್ತಷ್ಟು ತರಬೇತಿಯೊಂದಿಗೆ ಮುನ್ನಡೆದಾಗ ಯಶಸ್ಸು ನಮ್ಮದಾಗುತ್ತದೆ. ಸೋಲನ್ನು ಸೋಲೆಂದು ಅದನ್ನು ಅಲ್ಲಿಗೆ ಬಿಟ್ಟರೆ ಜೀವನದಲ್ಲಿ ಮೇಲೆರಲು ಸಾಧ್ಯವಿಲ್ಲ. ಜೀವನವು ಒಂದು ಹಾವು ಏಣಿ ಆಟವಿದ್ದಹಾಗೆ, ಸೋಲು ಗೆಲುವು ಇದ್ದದ್ದೆ. ಸೋತಾಗ ಕುಗ್ಗದೆ, ಗೆದ್ದಗಾ ಹಿಗ್ಗದೆ ಪ್ರತಿಯೊಂದು ಕ್ಷಣವನ್ನು ಸಮಾನವಾಗಿ ಸ್ವೀಕರಿಸಿದಾಗ ಬದುಕು ಹಸನಾಗುತ್ತದೆ.kavitha-sanil-inaugurating

img_7335


ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಕವಿತಾ ಸನಿಲ್ ಇವರು ಎಸ್.ಡಿ.ಎಂ ಮಂಗಳಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲಾ, ಕೈಗಾರಿಕಾ ಸಂಸ್ಥೆ ಮತ್ತು ಮಕ್ಕಳ ಹೆತ್ತವರ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಡಿಸಿ ಮಾತನಾಡಿದರು. ಶಾಲೆಯ ಆಡಳಿತಾಧಿಕಾರಿ ಶ್ರೀ ಗಣೇಶ್ ಭಟ್, ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಷ್ಟೀಯ ದೇಹದಾಡ್ಯ ಪಟು ಶ್ರೀ ಸಜಿತ್ ಶೆಟ್ಟಿ, ಐ.ಟಿ.ಐ ಪ್ರಾಂಶುಪಾಲರಾದ ಶ್ರೀ ನರೇಂದ್ರ, ಪ್ರಾಥಮಿಕ ಶಾಲಾ ಮುಖ್ಯೋಪಾಧಯರು ಮಾರ್ಯೆಟ್ ಮಾಸ್ಟರೇನಸ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ನಝೀಮಾ ಬಾನು, ಪ್ರೌಢಶಾಲಾ ನಾಯಕಿ ಅಫಿಯ, ಐ.ಟಿ.ಐ ನಾಯಕ ನಿರಂಜನ್, ಪ್ರಾಥಮಿಕ ಶಾಲಾ ನಾಯಕಿ ಮೇಘ, ಕ್ರೀಡಾ ನಾಯಕ ಮನೀಶ್ ಮತ್ತು ಉತ್ತಮ್ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಯರಾದ ಅಶೋಕ್ ಶೆಟ್ಟಿ ಸ್ವಾಗತಿಸಿದರು, ಶೇಖರ ಕಡ್ತಲ ವಂದಿಸಿದರು, ಸೈನಾಝ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *