ಮಂಗಳೂರು:ಮಕ್ಕಳ ಭವಿಷ್ಯವನ್ನು ರೂಪಿಸಲು ಅಂಗನವಾಡಿ ಕೇಂದ್ರಗಳು ತುಂಬಾ ಸಹಕರಿಯಾಗುತ್ತಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು ಅವರು ಸುರತ್ಕಲ್ ಸಮೀಪದ ಖಂಡಿಗೆ ನಂದಿನಿ ಮಿತ್ರವೃಂದ ( ರಿ) ನೂತನ ಅಂಗನವಾಡಿ ಕಟ್ಟಡದ ಉದ್ಘಟನೆಯನ್ನು ನೆರವೇರಿಸಿ ಮಾತನಾಡಿದರು ಗ್ರಾಮಾಂತರ ಪ್ರದೇಶದಲ್ಲಿ ನಂದಿನಿ ಮಿತ್ರ ವೃಂದ ಅಂಗನವಾಡಿ ನಿರ್ಮಿಸಿ ಉತ್ತಮ ಕೆಲಸ ಮಾಡಿದೆ, ಇಂತಹ ಸಂಸ್ಥೆಗಳಿಗೆ ಜನರ ಪೆÇ್ರತ್ಸಾಹ ಅಗತ್ಯ ಎಂದರು ಈ ಸಂದರ್ಭ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ತಾಲೂಕು ಪಂಚಾಯತ್ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಮುಲ್ಕಿ ಮೂಡಬಿದ್ರೆ ಬಿಜೆಪಿ ಮಂಡಲಾಧ್ಯಕ್ಷ ಈಶ್ವರ್ ಕಟೀಲ್, ಮಂಗಳೂರು ನಗರಾಭಿವೃಡ್ದಿ ಪ್ರಾದಿಕಾರದ ಸದಸ್ಯ ವಸಂತ ಬೆರ್ನಾಡ್, ಚೇಳಾಯರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಚೇಳಾಯರು, ಸದಸ್ಯ ಶಂಕರ ಶೆಟ್ಟಿ ಕೆರೆ ಮನೆ, ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಆಡಳಿತ ಮಂಡಳಿ ಗೌರಾವಾಧ್ಯಕ್ಷ ಉದಯಕುಮಾರ್ ಶೆಟ್ಟಿ ತೋಕೂರು ಗುತ್ತು, ಅಧ್ಯಕ್ಷ ದಯಾನಂದ ಶೆಟ್ಟಿ ಖಂಡಿಗೆ ಬೀಡು, ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಪ್ರಾಧ್ಯಾಪಕ ಜಗದೀಶ್ ಬಾಳ, ನಂದಿನಿ ಮಿತ್ರ ವೃಂದದ ಗೌರಾವಾಧ್ಯಕ್ಷ ಸತೀಶ್ ಪಿ ಅಂಚನ್, ಅಧ್ಯಕ್ಷ ಉದಯಕುಮಾರ್ ಖಂಡಿಗೆ ಕಾರ್ಯದರ್ಶಿ ಸುದೀರ್ ಕೆ ಸಾಲ್ಯಾನ್, ಉಪಾಧ್ಯಕ್ಷ ಗಣೇಶ್ ಮಯ್ಯ, ಕೋಶಾಧಿಕಾರಿ ಉಮೇಶ್ ಕರ್ಕೇರ ಮತ್ತಿತರರು ಇದ್ದರು.

