ಲೇಖನ
20 ರಿಂದ 26 ಜೂನ್ ಈ ಕಾಲಾವಧಿಯಲ್ಲಿ ರಾಮನಾಥ ದೇವಸ್ಥಾನ, ಗೋವಾದಲ್ಲಿ ಜರುಗಿದ ಏಳು ದಿನಗಳ ತೃತೀಯ `ಅಖಿಲ ಭಾರತೀಯ ಹಿಂದೂ ಅಧಿವೇಶನ’ದಲ್ಲಿ ಭಾರತ ಹಾಗೂ ನೇಪಾಳಗಳಿಗೆ `ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕೆನ್ನುವ ಠರಾವು `ಜಯತು ಜಯತು ಹಿಂದೂರಾಷ್ಟ್ರಮ್’ನ ಜಯಘೋಷದೊಂದಿಗೆ ಸಮ್ಮತವಾಯಿತು. ಈ ಸಮಯದಲ್ಲಿ ಭಾರತ, ನೇಪಾಳ ಹಾಗೂ ಬಾಂಗ್ಲಾದೇಶಗಳ 125 ಕ್ಕಿಂತ ಹೆಚ್ಚು ಹಿಂದೂ ಸಂಘಟನೆ ಹಾಗೂ ಸಂಪ್ರದಾಯಗಳ 400 ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಂಡಮಾನದಿಂದ ಪಾಕಿಸ್ತಾನದ ಸಿಂಧ ಪ್ರಾಂತ್ಯದವರೆಗೆ, ಕನ್ಯಾಕುಮಾರಿಯಿಂದ ಕಾಶ್ಮೀರ ಕಣಿವೆಯ ವರೆಗೆ, ಆಸ್ಸಾಂನಿಂದ ಪಂಜಾಬ ವರೆಗೆ ಹಾಗೂ ಒಡಿಶಾದಿಂದ ಗೋವಾ ವರೆಗೆ ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಈ ಅಧಿವೇಶನದ ನಿಮಿತ್ತ ಒಂದುಗೂಡುವುದು ಒಂದು ಚಮತ್ಕಾರವೇ ಸರಿ. ಪೂವರ್ಾಮ್ನಾಯ ಶ್ರೀಗೋವರ್ಧನಮಠ-ಪುರಿ ಪೀಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯರು ಸ್ವಾಮಿ ನಿಶ್ಚಲಾನಂದಸರಸ್ವತಿ ಮತ್ತು ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ಇವರು ತಮ್ಮ ಸಂದೇಶ ಕಳುಹಿಸಿ ಈ ಅಧಿವೇಶನಕ್ಕೆ ತಮ್ಮ ಬೆಂಬಲ ನೀಡಿದರು. ಈ ಏಳು ದಿನಗಳ ಅಧಿವೇಶನದ ಪಕ್ಷಿನೋಟ…

ಸಮಾಜ, ದೇಶ ಹಾಗೂ ಧರ್ಮ ಹಿತದ ವಿಚಾರಮಂಥನ !
ತೃತೀಯ `ಅಖಿಲ ಭಾರತೀಯ ಹಿಂದೂ ಅಧಿವೇಶನ’ದಲ್ಲಿ ರಾಷ್ಟ್ರದ ವಿವಿಧ ಸಮಸ್ಯೆಗಳೊಂದಿಗೆ ಹಿಂದೂ ಧರ್ಮ ಹಾಗೂ ಧಮರ್ೀಯರ ಕಲ್ಯಾಣಕ್ಕಾಗಿವಿವಿಧ ವಿಷಯಗಳ ಮೇಲೆ ಚಚರ್ೆ ಮಾಡಲಾಯಿತು. ರಾಮಮಂದಿರ, ದೇವನದಿ ಗಂಗಾ ಮುಂತಾದ ಹಿಂದೂಗಳ ಗೌರವಸ್ಥಾನಗಳ ರಕ್ಷಣೆ, ಗೋಪಾಲನೆ ಹಾಗೂ ಗೋರಕ್ಷಣೆ, ದೇವಸ್ಥಾನ ಸಂಸ್ಕ ೃತಿಯ ರಕ್ಷಣೆ ಹಾಗೂ ಅಭಿವೃದ್ಧಿ, ಹಿಂದೂ ಧಮರ್ೀಯರ ರಕ್ಷಣೆ ಹಾಗೂ ಸಂತ್ರಸ್ತ ಹಿಂದೂಗಳ ಪುನರ್ವಸತಿ, ವಿದೇಶಗಳಲ್ಲಿ ಅಸುರಕ್ಷಿತ ಸ್ಥಿತಿಯಲ್ಲಿರುವ ಹಿಂದೂಗಳ ಸಮಸ್ಯೆಗಳಿಗೆ ಪರಿಹಾರ, ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಶ್ರೀಲಂಕಾ ಈ ದೇಶಗಳಿಂದ ಬಂದಿರುವ ಶರಣಾಥರ್ಿ ಹಿಂದೂಗಳ ಪುನರ್ವಸತಿ, ಹಿಂದೂ ಧರ್ಮದ ಪ್ರಸಾರ, ಹಿಂದೂಗಳಲ್ಲಿ ಧರ್ಮಜಾಗೃತಿಯುಂಟು ಮಾಡುವಂತಹ ಉಪಕ್ರಮ ಮುಂತಾದ ವಿಷಯಗಳ ಮೇಲೆ ನಡೆಸಲಾದ ಗಹನವಾದ ಹಾಗೂ ಪ್ರಾಯೋಗಿಕ ಮಟ್ಟದ ವಿಚಾರಮಂಥನವು ಹಿಂದೂ ಸಂಪ್ರದಾಯ ಹಾಗೂ ಸಂಘಟನೆಗಳಿಗೆ ವರ್ಷವಿಡಿ ಸಮಾನ ಕೃತಿ ಕಾರ್ಯಕ್ರಮ ನೆರವೇರಿಸಲು ಉಪಯುಕ್ತವಾಗುವಂತಿತ್ತು. ಕೇವಲ ವಿಚಾರಮಂಥನವಲ್ಲ, ಪ್ರತ್ಯಕ್ಷ ಕೃತಿಯ ಆದರ್ಶ ! ಅಧಿವೇಶನದಲ್ಲಿ ಗೋಪಾಲನೆ ಹಾಗೂ ಗೋರಕ್ಷಣೆಯ ಸತ್ರದಲ್ಲಿ ಎಲ್ಲ ಹಿಂದುತ್ವನಿಷ್ಠ ಸಂಘಟನೆಗಳು ಹೇಗೆ ಪರಸ್ಪರರಿಗೆ ಪೂರಕ ಹಾಗೂ ಸಂಘಟಿತ ಕಾರ್ಯ ಮಾಡಬಹುದು ಎಂಬ ಬಗ್ಗೆ ಚಿಂತನ ನಡೆಸಲಾಯಿತು. ಪಂಜಾಬ ಗೋರಕ್ಷಾ ದಳದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ.ಸತೀಶಕುಮಾರ ಇವರು 31
ಡಿಸೆಂಬರ 2014 ವರೆಗೆ ಪೂರ್ಣ ಭಾರತದಲ್ಲಿ ಗೋಹತ್ಯಾ ನಿಷೇಧವಾಗಬೇಕು, ಎಂದು ಈ ಅಧಿವೇಶನದ ನಿಮಿತ್ತ ಘೋಷಣೆ ಮಾಡಿದರು. ಕೇವಲ ಘೋಷಣೆ ಮಾಡಿ ಸುಮ್ಮನಾಗದೇ ಅಧಿವೇಶನದಲ್ಲಿನ ಎಲ್ಲಾ ಸಂಘಟನೆಗಳ ಪ್ರತಿನಿಧಿಗಳ ಒಂದು ದಳವನ್ನು ಅವರು ಸಿದ್ಧ ಮಾಡಿದರು. ಈ ದಳದ ಮುಖಾಂತರ ಅಧಿವೇಶನ ಸ್ಥಳದಿಂದ 30 ಕಿ.ಮೀ. ಪರಿಸರದಲ್ಲಿರುವ ಮಡಗಾಂವದಲ್ಲಿನ ಅನಧಿಕೃತ ಕಸಾಯಿಖಾನೆಯಿಂದ 50 ಗೋವಂಶಗಳನ್ನು ಬಿಡುಗಡೆ ಮಾಡಲಾಯಿತು. ಈ ರೀತಿಯಾಗಿ ಪ್ರತ್ಯಕ್ಷ ಪ್ರಾಯೋಗಿಕ ಕೃತಿ ಮಾಡಲು ಸಿಕ್ಕಿರುವುದರಿಂದ ಗೋರಕ್ಷಣೆಯ ಕಾರ್ಯ ಮಾಡುವವರಿಗೆ ತುಂಬಾಕಲಿಯಲು ಸಿಕ್ಕಿತು ಹಾಗೂ ಇತರ ಗೋಪ್ರೇಮಿಗಳಲ್ಲಿ ಗೋರಕ್ಷಣೆ ಮಾಡುವ ಬಗ್ಗೆ ಆತ್ಮವಿಶ್ವಾಸವು ನಿಮರ್ಾಣವಾಯಿತು.
ಏಕಾಂಗಿ ಹೋರಾಟಗಾರರ ಹೃತ್ಪೂಪೂರ್ವಕ ಸನ್ಮಾನ !
ಈ ಅಧಿವೇಶನದಲ್ಲಿ ದೇಶ ಹಾಗೂ ಧರ್ಮದ ಹಿತಕ್ಕಾಗಿ ಹೋರಾಡುವ ಏಕಾಂಗಿ ಹೋರಾಟಗಾರರಿಗೆ ಯಥೋಚಿತ ಸನ್ಮಾನ ಮಾಡಿ ಎಲ್ಲರೆದುರಿಗೆ ಅವರ ಆದರ್ಶವನ್ನಿಡಲಾಯಿತು. ನೇಪಾಳದಲ್ಲಿ ಹಿಂದೂ ರಾಷ್ಟ್ರದ ಪುನಸ್ಥರ್ಾಪನೆಗಾಗಿ ರಾಜಕೀಯ ಮಟ್ಟದಲ್ಲಿ ಹೋರಾಡುವ ನೇಪಾಳದ ಮಾಜಿ ರಾಜಗುರು ಹಾಗೂ ನೇಪಾಳದ ರಾಷ್ಟ್ರೀಯ ಧರ್ಮಸಭೆಯ ಅಧ್ಯಕ್ಷರಾದ ಪ್ರಾ. ಡಾ. ಮಾಧವ ಭಟ್ಟಾರಾಯರು, ಬಾಂಗ್ಲಾದೇಶದ ಹಿಂದೂಗಳ ಮಾನವಾಧಿಕಾರದ
ರಕ್ಷಣೆಗಾಗಿ ಕಳೆದ 25 ವರ್ಷಗಳಿಂದ `ಬಾಂಗ್ಲಾದೇಶದ ಮೈನಾರಿಟಿ ವಾಚ್’ನ ಮುಖಾಂತರವಾಗಿ ಪ್ರಾಣವನ್ನು ಪಣಕ್ಕಿಟ್ಟು ಕಾರ್ಯ ಮಾಡುತ್ತಿರುವ ನ್ಯಾಯವಾದಿ ರವೀಂದ್ರ ಘೋಷ ಮುಂತಾದ ಮಹನೀಯರನ್ನು ಯಥೋಚಿತವಾಗಿ ಸನ್ಮಾನಿಸಲಾಯಿತು. ಅವರು ನಿರಂತರವಾಗಿ ಮಾಡುತ್ತಿರುವ ಸಂಘರ್ಷಕ್ಕೆ ಎಲ್ಲ ಹಿಂದೂಗಳ ಬೆಂಬಲದ ಬಲ ಸಿಗಬೇಕೆನ್ನುವುದೇ ಈ ಸನ್ಮಾನದ ಉದ್ದೇಶವಾಗಿತ್ತು. ಹೊರದೇಶದಲ್ಲಿರುವ ಹಿಂದೂಗಳಿಗಾಗಿ ಅಲ್ಲಿದ್ದು ಹೋರಾಡುವವರನ್ನು ಹಾಗೂ ದೇಶದೊಳಗಿನ ಹಿಂದೂಗಳಿಗಾಗಿ ಹೋರಾಡುವ ಏಕಾಂಗಿ ಹೋರಾಟಗಾರರನ್ನೂ ಸನ್ಮಾನಿಸಲಾಯಿತು. ಅದರಲ್ಲಿ ಓಡಿಶಾದಲ್ಲಿ ವೈತರಣಾ ನದಿಯ ಮೇಲಿನ ಅತಿಕ್ರಮಣವನ್ನು ವಿರೋಧಿಸುತ್ತಿರುವಾಗ ಹಣದ ಆಮಿಷ, ಜೀವಬೆದರಿಕೆ ಬಂದರೂ ಅದಕ್ಕೆ ಜಗ್ಗದೇ ಹೋರಾಡುವ ಶ್ರೀ. ಮುರಲಿ ಮನೋಹರ ಶಮರ್ಾ, ಅಯೋಧ್ಯೆಯಲ್ಲಿ ಹಿಂದೂಗಳಿಗೆ ಶ್ರೀರಾಮನ ದರ್ಶನ ಪಡೆಯುವ ಅನುಮತಿ ದೊರಕಿಸಿಕೊಟ್ಟು ಮುಂದೆ ರಾಮಮಂದಿರದ ನಿಮರ್ಾಣಕ್ಕಾಗಿ ಜೀವಮಾನವಿಡೀ ನ್ಯಾಯಾಂಗ ಹೋರಾಟ ನಡೆಸಿದ ಸವರ್ೋಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ.ಹರಿಶಂಕರಜಿ ಜೈನ, 13 ವರ್ಷಗಳಿಂದ ಹಿಂದೂ ವಾಯಿಸ್ ಈ ಮಾಸಿಕದ ಮೂಲಕ ಹಿಂದೂಗಳಿಗೆ ಆಧಾರ ನೀಡುವ ಪಿ. ದೇವಮುಥ್ಥೂ, ಹಿಂದೂಗಳ ಬೆಂಬಲದಿಂದ ಜಯಗಳಿಸಿದ ತೆಲಂಗಣಾದ ನೂತನ ಸಂಸದ ರಾಜಾಸಿಂಗ್ ಠಾಕೂರರಂತಹವರ ಸನ್ಮಾನ ಹೃದಯಸ್ಪಶರ್ಿಯಾಗಿದ್ದವು.
ಏಕೆಂದರೆ ಹಿಂದೂ ಎಂಬ ವಿಶಿಷ್ಟ ಚೌಕಟ್ಟಿನೊಳಗೆ ಕಾರ್ಯ ಮಾಡುವಾಗ ಅವರ ಮೇಲೆ ಅನೇಕ ಸಂಕಟಗಳು ಬಂದವು; ಆದರೆ ಆ ಸಮಯದಲ್ಲಿ
ಅವರ ಬೆಂಬಲಕ್ಕೆ ಯಾವುದೇ ಪಕ್ಷ ಅಥವಾ ಸಂಘಟನೆಗಳಿರಲಿಲ್ಲ. ಪ್ರಾಯಶಃ ಪಕ್ಷ ಹಾಗೂ ಸಂಘಟನೆಗಳೂ ತತ್ತ್ವಗಳಿಗೆ ಎಳ್ಳುನೀರು ಬಿಟ್ಟು
ವಿರೋಧಕರೊಂದಿಗೆ ಕೈಜೋಡಿಸಿದವು. ಇಂತಹ ಸ್ಥಿತಿಯಲ್ಲಿ ನಿರಾಶರಾಗದೇ, ಕುಗ್ಗದೇ ಇವರು ಹಿಂದೂಹಿತಕ್ಕಾಗಿ ಹೋರಾಟ ಮುಂದುವರಿಸಿದರು ಹಾಗೂ ಇದರ ಅವಲೋಕನವನ್ನು ದೇಶ-ವಿದೇಶಗಳಲ್ಲಿ ಹಿಂದೂಗಳಿಗಾಗಿ ಪ್ರಾಮಾಣಿಕ ಕಾರ್ಯ ಮಾಡುವ ಸಂಘಟನೆಗಳ ಪದಾಧಿಕಾರಿಗಳೆದುರು ತೆರೆದಿಡಲಾಯಿತು. ಈ ಸನ್ಮಾನದಿಂದ ಈ ಹೋರಾಟಗಾರರು ಕೃತಾರ್ಥರಾದರು; ಅಲ್ಲದೇ ಅನೇಕ ಉದಯೋನ್ಮುಖರಿಗೆ ಕಾರ್ಯ ಮಾಡಲು ಹುಮ್ಮಸ್ಸು ಬಂದಿತು.
ಭಾರತದ ಐಕ್ಯತೆಯ ದರ್ಶನ !
ಈ ಅಧಿವೇಶನಕ್ಕೆ ತಮಿಳುನಾಡಿನಿಂದ ಬಂದಿರುವ 7 ಸಂಘಟನೆಗಳ ಸುಮಾರು 25 ಕ್ಕಿಂತ ಹೆಚ್ಚು ಪ್ರತಿನಿಧಿಗಳಿಗೆ ಹಿಂದಿ ಹಾಗೂ ಆಂಗ್ಲ ಭಾಷೆಯ ಜ್ಞಾನವಿರಲಿಲ್ಲ. ಅವರು ಜೊತೆಯಲ್ಲಿ ಅನುವಾದಕರನ್ನು ಇಟ್ಟಿದ್ದರು. ಪೂರ್ಣ ವಿಷಯವನ್ನು ಅವರು ಅನುವಾದಕರ ಮುಖಾಂತರ ಕೇಳುತ್ತಿದ್ದರು ಹಾಗೂ ತಮ್ಮ ವಿಷಯವನ್ನೂ ಅನುವಾದಕರ ಮುಖಾಂತರ ಮುಂದಿಡುತ್ತಿದ್ದರು. ಅವರ ಭಾಷೆ ಇತರರಿಗೆ ತಿಳಿಯದಿದ್ದರೂ ಅವರ ಭಾವನೆಗಳು ಎಲ್ಲರತನಕ ತಲುಪುತ್ತಿದ್ದವು. ಕೇರಳಿ, ಆಸಾಮಿ, ಬಾಂಗ್ಲಾದೇಶಿ ಹಾಗೂ ನೇಪಾಳಿನ ಹಿಂದೂ ಸಂಘಟನೆಗಳ ಪ್ರತಿನಿಧಿಗಳ ಹಿಂದಿಯೂ ಅಷ್ಟೇಕಷ್ಟೇ ಇದ್ದರೂ ಅವರು ಅವರ ವಿಷಯ ಎಲ್ಲರ ತನಕ ತಲುಪಬೇಕು, ಎಂದು ಹಿಂದಿ ಭಾಷೆಯಲ್ಲಿ ಮಾತನಾಡಲು ಆದ್ಯತೆ ನೀಡಿದರು. ಇದೆಲ್ಲವನ್ನೂ ಹೇಳುವ ತಾತ್ಪರ್ಯ ಇಷ್ಟೇ, ಈ ಅಧಿವೇಶನದಿಂದ ರಾಷ್ಟ್ರಭಾಷೆಯ ಮಹತ್ವ ವಿಷದಪಡಿಸಲಾಯಿತು ಹಾಗೂ ಅದನ್ನು ಕಲಿಯುವ ಅಗತ್ಯತೆಯನ್ನೂ ವ್ಯಕ್ತ ಪಡಿಸಲಾಯಿತು. ಈ ಅಧಿವೇಶನದಲ್ಲಿ ಜಾತಿ, ಭಾಷೆ, ಪ್ರಾಂತ, ಸಂಪ್ರದಾಯ ಹಾಗೂ ಸಂಘಟನೆ ಇವುಗಳ ಬಂಧನವನ್ನು ಮುರಿದು ಎಲ್ಲರೂ ಕೇವಲ ಹಿಂದೂ ಎಂದು ಏಳು
ದಿನಗಳ ಕಾಲ ಒಂದಾದರು, ಈ ಚಿತ್ರಣವು ಭಾರತದ ಐಕ್ಯತೆಯ ದರ್ಶನ ಮಾಡುವಂತಹದ್ದಾಗಿತ್ತು. ಈ ಐಕ್ಯತೆಯು ಕೋಮು, ಭಾಷೆ, ಪ್ರಾಂತಗಳ ಹಾಗೂ ಪಕ್ಷಗಳ ಅಸ್ಮಿತೆಯಲ್ಲಿ ಕಾರ್ಯ ಮಾಡುವವರಿಗೆ ಸಾಕಷ್ಟು ಕಲಿಸುವಂತಹದ್ದಾಗಿತ್ತು. ಅತ್ಯಂತ ಸೌಹಾರ್ದಯುತ ಹಾಗೂ ಭಿನ್ನಾಭಿಪ್ರಾಯವಿಲ್ಲದ ವಾತಾವರಣದಲ್ಲಿ ನೆರವೇರಿದ ಈ ಅಧಿವೇಶನವು ಸಮಾಜದಲ್ಲಾಗುವ ವಿವಿಧ ಪ್ರಕಾರದ ಅಧಿವೇಶನಗಳಿಗೆ ಹಾಗೂ ಸಮ್ಮೇಳನಗಳಿಗೆ ಆದರ್ಶಪ್ರಾಯವಾಗಿತ್ತು.
ಮೋದಿ ಸರಕಾರಕ್ಕೆ ಅಧಿವೇಶನದ ಬೇಡಿಕೆಗಳು !
ಭಾರತ ಹಾಗೂ ನೇಪಾಳ ಈ ಹಿಂದೂಬಹುಸಂಖ್ಯಾತ ರಾಷ್ಟ್ರ್ರಗಳನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು, ಭಾರತದೊಳಗಿರುವ 5
ಕೋಟಿ ಬಾಂಗ್ಲಾದೇಶಿ ನುಸುಳುಕೋರರಿಗೆ ಸಹಾಯ ಮಾಡುವವರನ್ನು ದೋಷಿಗಳೆಂದು ನಿರ್ಧರಿಸಿ ಕಠಿಣ ಶಿಕ್ಷೆ ವಿಧಿಸುವುದು, ದೇಶಮಟ್ಟದಲ್ಲಿ
ಗೋಹತ್ಯಾನಿಷೇಧ ಕಾನೂನು ತರುವುದು, ಸಮಾನ ನಾಗರಿಕ ಕಾನೂನು ಹಾಗೂ ಮತಾಂತರನಿಷೇಧ ಕಾನೂನು ಜ್ಯಾರಿಗೆ ತಂದು ಹಿಂದೂ ವಂಶದ ರಕ್ಷಣೆ ಮಾಡುವುದು, ಬಾಂಗ್ಲಾದೇಶಿ ಹಾಗೂ ಪಾಕಿಸ್ತಾನಿ ಶರಣಾಥರ್ಿ ಹಿಂದೂಗಳಿಗೆ ಭಾರತದ ನಾಗರಿಕತ್ವ ಕೊಡಲು ಕಾನೂನು ಮಾಡುವುದರ ಜೊತೆಗೆ ವಿಶ್ವಾದ್ಯಂತ ಹಿಂದೂಗಳ ಸುರಕ್ಷೆ ಮಾಡುವ ಧೋರಣೆ ನಿಶ್ಚಿತಗೊಳಿಸುವುದು, ಹೀಗೆ ದೇಶದಲ್ಲಿನ ಹಿಂದೂಗಳ ಅಸ್ಮಿತೆಯೊಂದಿಗೆ ಸಂಬಂಧಪಟ್ಟ ಹಾಗೂ ವಿದೇಶಿ ಹಿಂದೂಗಳ ರಕ್ಷಣೆಗೆ ಸಂಬಂಧಿಸಿದ ಠರಾವನ್ನು ಈ ಅಧಿವೇಶನದಲ್ಲಿ ಒಮ್ಮುಖವಾಗಿ ಸಮ್ಮತಿಸಲಾಯಿತು.
ಸಮಾನ ಕೃತಿ ಕಾರ್ಯಕ್ರಮ
ಒಂದೆಡೆ ಈ ಠರಾವಿನ ಮುಖಾಂತರ ಸರಕಾರಕ್ಕೆ ಎಲ್ಲ ಹಿಂದುತ್ವವಾದಿ ಸಂಘಟನೆಯ ಬೇಡಿಕೆ ಮುಟ್ಟಿಸುವುದರೊಂದಿಗೆ 20 ರಾಜ್ಯಗಳ 80 ಸ್ಥಳಗಳಲ್ಲಿ ಪ್ರಾಂತೀಯ ಅಧಿವೇಶನ, 100 ಕಡೆಗಳಲ್ಲಿ ಬಹಿರಂಗ ಹಿಂದೂ ಧರ್ಮಜಾಗೃತಿ ಸಭೆಗಳ ಮೂಲಕ ಈ ಠರಾವಿನ ಬಗ್ಗೆ ಹಿಂದೂಗಳ ಜನಮತಸಿದ್ಧಗೊಳಿಸುವುದು, ನೈಸಗರ್ಿಕ ಹಾಗೂ ಮಾನವೀ ಆಪತ್ತುಗಳ ಸಮಯದಲ್ಲಿ ಎಲ್ಲ ಸಂಘಟನೆಗಳು ಒಟ್ಟಾಗಿ ಆಪತ್ಕಾಲೀನ ಸಹಾಯಕಾರ್ಯ ಮಾಡಿ ಹಿಂದೂಗಳಿಗೆ ಅಧಾರ ನೀಡುವುದು, ಹಿಂದೂಗಳ ಸಬಲೀಕರಣ ಮಾಡಲು ಭಾರತಾದ್ಯಂತ ಸ್ವರಕ್ಷಣಾ ತರಬೇತಿವರ್ಗ ಉಪಕ್ರಮ ನಡೆಸುವುದು, ಮುಂದಿನ ಹಂತದಲ್ಲಿ ಪ್ರಚಲಿತ ಕಾನೂನಿಗನುಸಾರ ಬಾಂಗ್ಲಾದೇಶದ ನುಸುಳುಕೋರರನ್ನು ವಾಪಾಸು ಕಳುಹಿಸುವ ಅಭಿಯಾನವನ್ನು ಕೈಗೆತ್ತಿಕೊಳ್ಳುವುದು, ಇವುಗಳಂತಹ ಸಮಾನ ಕೃತಿ ಕಾರ್ಯಕ್ರಮಗಳನ್ನು ಈ ಅಧಿವೇಶನದಲ್ಲಿ ನಿರ್ಧರಿಸಲಾಯಿತು. ಇದೆಲ್ಲ ಮಾಡುತ್ತಿರುವಾಗ ಬರುವಂತಹ ಸಮಸ್ಯೆಗಳಿಗೆ 9
ರಾಜ್ಯಗಳಲ್ಲಿನ ಹಿಂದುತ್ವವಾದಿ ಸಂಘಟನೆಗಳಿಗೆ ಕಾನೂನು ಸಹಾಯ ಮಾಡುವುದರೊಂದಿಗೆ ಅವರಿಗೆ ರಾಷ್ಟ್ರ ಹಾಗೂ ಧರ್ಮ ಹಿತದ ಉಪಕ್ರಮಗಳಿಗಾಗಿ ಕಾನೂನು ಮಾರ್ಗದರ್ಶನ ನೀಡುವುದಾಗಿ ಹಿಂದೂ ವಿಧಿಜ್ಞ ಪರಿಷತ್ತು ಘೋಷಣೆ ಮಾಡಿರುವುದರಿಂದ ಈ ಸಮಾನ ಕೃತಿ ಕಾರ್ಯಕ್ರಮಕ್ಕೆ ಬಲ ಸಿಕ್ಕಿದಂತಾಗಿದೆ. ಹಿಂದೂ ರಾಷ್ಟ್ರಕ್ಕಾಗಿ ಸ್ವಾತಂತ್ರ್ಯಹೋರಾಟ ಆರಂಭಿಸುವ ಸಮಯ !
ದೇಶದಲ್ಲಿ ಇತ್ತೀಚೆಗೆ ನಡೆದ ಅಧಿಕಾರಹಸ್ತಾಂತರವು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪೂರಕವಾಗಿದೆ ಎಂಬ ವಿಚಾರವನ್ನು
ಇಟ್ಟುಕೊಳ್ಳುವುದು ಭ್ರಮೆಯಾಗಿದೆ. ಏಕೆಂದರೆ ದೇಶದಲ್ಲಿ ಧರ್ಮನಿರಪೇಕ್ಷ (ಜಾತ್ಯತೀತ) ವ್ಯವಸ್ಥೆ ಪ್ರಚಲಿತವಿದೆ. ಆದುದರಿಂದ ಕ್ರಿ.ಶ. 711 ರಲ್ಲಿ
ಪ್ರಾರಂಭವಾದ ಹಿಂದೂಗಳ ಸ್ವಾತಂತ್ರ್ಯ ಹೋರಾಟವು ಇಂದಿಗೂ ಮುಗಿದಿಲ್ಲ. ನಮ್ಮ ಮಾನಮಾಯರ್ಾದೆಯ ಮತ್ತು ಗೌರವಚಿಹ್ನೆಗಳ ರಕ್ಷಣೆಗಾಗಿ ಹಿಂದೂಗಳು ಪೂರ್ವಜರ ಅದಮ್ಯ ಇಚ್ಛಾಶಕ್ತಿಯಿಂದ ಮತ್ತು ಅತುಲನೀಯ ಪರಾಕ್ರಮದಿಂದ ಮತ್ತೊಮ್ಮೆ ಹೊಸದಾಗಿ ಸ್ವಾತಂತ್ರ್ಯ ಹೋರಾಟ ನಡೆಸುವ ಸಮಯವು ಈಗ ಬಂದಿದೆ. ಈ ಬಗ್ಗೆ ಉಪಸ್ಥಿತ ಹಿಂದೂ ಸಂಘಟನೆಗಳು ಹಾಗೂ ಸಂಪ್ರದಾಯಗಳಲ್ಲಿ ಒಮ್ಮತ ಮೂಡಿತು.
ತೃತೀಯ ಅಖಿಲ ಭಾರತೀಯ ಹಿಂದೂ ಅಧಿವೇಶನದ ನಿಮಿತ್ತ 125 ಕ್ಕಿಂತ ಹೆಚ್ಚು ಹಿಂದೂ ಸಂಘಟನೆ ಹಾಗೂ ಸಂಪ್ರದಾಯಗಳಲ್ಲಾದ ಒಮ್ಮತವು ಮಹತ್ವದ ಘಟನೆಯಾಗಿದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅಖಿಲ ಭಾರತೀಯ ಹಿಂದೂ ಅಧಿವೇಶನಗಳ ಶೃಂಖಲೆಯ ಮುಖಾಂತರ ಹಿಂದೂ ಸಂಘಟನೆಗಳಿಗೆ ರಾಷ್ಟ್ರೀಯ ಮಟ್ಟದ ವ್ಯಾಸಪೀಠವು ಲಭ್ಯವಾಗಿದೆ. ಇದೇ ಈ ಅಧಿವೇಶನದ ನಿಜವಾದ ಫಲಶೃತಿ ಎನ್ನಬಹುದು.
– ಗುರುಪ್ರಸಾದ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
