ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಅತ್ತಾವರ ವಾರ್ಡ್‍ನ ಮಾರ್ನಮಿಕಟ್ಟೆ ಸರ್ಕಲ್‍ನ ಬಳಿ 5|6 ವರ್ಷಗಳಿಂದ ನಿರಂತರ ಡೈನೇಜ್ ಬ್ಲಾಕ್ ಮತ್ತು ದುರಸ್ಥಿಯಲ್ಲಿದ್ದು ಈ ಬಗ್ಗೆ ಸ್ಥಳೀಯರು ಅತ್ತಾವರ ವಾರ್ಡು ಅಧ್ಯಕ್ಷರು ಹಾಗೂ ಜಿಲ್ಲಾ ಸ್ಲಂ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಚೇತಕ್ ಪೂಜಾರಿ ಅವರ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮನವಿ ಸಲ್ಲಿಸಿದರು.

marnami-katte

ಇದಕ್ಕೆ ಸ್ಪಂದಿಸಿದ ಸಂಸದರು ಡೈನೇಜ್ ಅನ್ನು ಕೂಡಲೇ ಸರಿಪಡಿಸುವಂತೆ ಮ.ನ.ಪಾ. ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಶಾಲ್ ನಾಥ್ ಅವರಿಗೆ ಸೂಚಿಸಿದ್ದು ಸಮಸ್ಯೆ ಕೂಡಲೇ ಬಗೆ ಹರಿಯಿತು.

ವಾರ್ಡ್ ಪ್ರಧಾನ ಕಾರ್ಯದರ್ಶಿ ನಾಗೇಶ್ ಪೂಜಾರಿ ಹಾಗೂ ಸ್ಥಳೀಯರಾದ ಎಂ. ಸಲಾಂ ಸಾಲಿ ಅಸನ್ ಮಹಮ್ಮದ್ ಅಮೀನ್ ಅಭಿಷೇಕ್ ಅಬ್ದುಲ್ ರಶೀದ್ ಯೋಗೀಶ್ ಕುಡುಪಾಡಿ, ಮನೋಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *