ವಿಟ್ಲ: ದ ಕ ಜಿ ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಧ್ವಜಾರೋಹಣವನ್ನು ವಿಟ್ಲದ ಉದ್ಯಮಿ ಸುಭಾಶ್ಚಂದ್ರ ನಾಯಕ್ ನೆರವೇರಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಯೋಗೀಶ್ವರ ಮಠಾಧಿಪತಿ ರಾಜಗುರು ಶ್ರದ್ಧಾನಾಥಾಜಿ ಮಹಾರಾಜ, ವಿಟ್ಲ ಜೇಸಿಐ ಅಧ್ಯಕ್ಷ ಬಾಬು ಕೆ ವಿ, ಲಯನ್ಸ್ ಕ್ಲಬ್ ಅಧ್ಯಕ್ಷ ಸುದರ್ಶನ ಪಡಿಯಾರ್, ಪ ಪಂ ಸದಸ್ಯ ಜಯಂತ, ಬಿ ಆರ್ ಪಿ ಬಂಟ್ವಾಳದ ನಾರಾಯಣ ಗೌಡ, ಸಿ ಆರ್ ಪಿ ಶಿವರಾಮ ಭಟ್, ಮುಖ್ಯ ಶಿಕ್ಷಕ ಮೋಹನ್ ರಾಜ್ ಮತ್ತು ಸಹಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಯ್ಯ ಕೆ ಮತ್ತು ಸದಸ್ಯರು, ಮಕ್ಕಳು ಹಾಗೂ ಪೋಷಕರು ಉಪಸ್ಥಿತರಿದ್ದರು.

