ಮೂಡುಬಿದಿರೆ: ಮನೆಗೆ ಪೈಂಟಿಗ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪ್ರಾಂತ್ಯ ಗ್ರಾಮದ ವಿಶಾಲನಗರದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಮೂಡಿಗೆರೆ ನಿವಾಸಿ ಆಶಿಶ್ ಎಂ (32) ಮೃತಪಟ್ಟ ಯುವಕ. ಆಶಿಶ್ ರೋಲಿಂಗ್ ಬ್ರೆಶ್ ಮೂಲಕ ಪೈಂಟಿಂಗ್ ಮಾಡುತ್ತಿದ್ದಾಗ ಸಮೀಪದಲ್ಲೇ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಅದು ಸ್ಪರ್ಶಿಸಿ ಈ ದುರಂತ ನಡೆದಿದೆ. ಪತ್ನಿ ಮನೆ ಪೂಂಜಾಲಕಟ್ಟೆಯಾಗಿದ್ದು ಅವರ ಸಂಬಂಧಿಕರ ಪರಿಚಯದಿಂದ ವಿಶಾಲನಗರದ ಶಾಹಿದಾ ಎಂಬವರ ಮನೆಯಲ್ಲಿ ನಾಲ್ಕು ಮಂದಿ ಸೇರಿ ಪೈಂಟಿಂಗ್ ಮಾಡುತ್ತಿದ್ದರು. ಮೃತರಿಗೆ ಪತ್ನಿ ಇದ್ದಾರೆ. ಮೂಡುಬಿದಿರೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.

