ಮೂಡುಬಿದಿರೆ: ರೋಟರಿ ಕ್ಲಬ್ ಟೆಂಪಲ್ ಟೌನ್‍ನ ಆಶ್ರಯದಲ್ಲಿ ಇಲ್ಲಿನ ಮಹಾವೀರ ಕಾಲೇಜಿನ ಜಿವಿಪೈ ಕ್ರೀಡಾಂಗಣದಲ್ಲಿ ರೋಟರಿ ಕ್ಲಬ್‍ಗಳ ವಲಯ ಮಟ್ಟದ ಕ್ರೀಡಾಕೂಟದ ಸಮಾರೋಪ ನಡೆಯಿತು.

club

ಸಮಾರಂಭದ ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಉಪರಾಜ್ಯಪಾಲ ಸಂತೋಷ್ ಶೆಟ್ಟಿ, ಎಂ.ಕೆ.ಅನಂತ್ರಾಜ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ, ಜಿಎಸ್‍ಆರ್ ಡಾ. ಹರೀಶ್ ನಾಯಕ್, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಶರೀಫ್, ಉದ್ಯಮಿ ನಾರಾಯಣ ಪಿ.ಎಂ., ಎಕ್ಸಲೆಂಟ್ ಕಾಲೇಜಿನ ಚೆಯರ್‍ಮೆನ್ ಯುವರಾಜ್ ಜೈನ್ ಭಾಗವಹಿಸಿದರು, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್‍ನ ಅಧ್ಯಕ್ಷ ರಾಜೇಶ್ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ವಲಯ ಕ್ರೀಡಾ ಸಂಯೋಜಕ ನಟೇಶ್ ಉಡುಪ, ರೋಟರಿ ಟೆಂಪಲ್ ಟೌನ್‍ನ ಕ್ರೀಡಾ ಸಂಯೋಜಕ ಪ್ರವೀಣ ಪಿರೇರಾ, ಕಾರ್ಯದರ್ಶಿ ಹರೀಶ್ ಉಪಸ್ಥಿತರಿದ್ದರು.

ಫಲಿತಾಂಶ: ಕ್ರಿಕೆಟಿನಲ್ಲಿ ರೋಟರಿಕ್ಲಬ್ ಪುತ್ತೂರು ಸಿಟಿ ಪ್ರಥಮ, ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ವಾಲಿಬಾಲ್ ರೋಟರಿ ಕ್ಲಬ್ ಬಂಟ್ವಾಳ (ಪ್ರಥಮ), ರೋಟರಿ ಕ್ಲಬ್ ಟೆಂಪಲ್ ಟೌನ್ ಮೂಡುಬಿದಿರೆ (ದ್ವಿತೀಯ), ತ್ರೋಬಾಲ್ ರೋಟರಿ ಕ್ಲಬ್ ಬಂಟ್ವಾಳ (ಪ್ರಥಮ) ರೋಟರಿ ಕ್ಲಬ್ ಪುತ್ತೂರು ಸಿಟಿ (ದ್ವಿತೀಯ).

By suddi9

Leave a Reply

Your email address will not be published. Required fields are marked *