ಬಜಪೆ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಜನಾ ಸಪ್ತಾಹ ಶುಕ್ರವಾರ ಪ್ರಾರಂಭಗೊಂಡಿತು.ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ಬೆಳಿಗ್ಗೆ ಸೂರ್ಯೋದಯದ ವೇಳೆ ಭಜನಾ ಸಪ್ತಾಹವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ದೇವಳದ ಅರ್ಚಕ ಹಾಗೂ ಮೋಕ್ತೇಸರ ವಾಸುದೇವ ಅಸ್ರಣ್ಣ, ಅನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಡಾ.ಕೆ. ರವೀಂದ್ರನಾಥ ಪೂಂಜಾ, ಅರ್ಚಕರಾದ ಅನಂತಪದ್ಮನಾಭ ಅಸ್ರಣ್ಣ, ಕಮಲಾದೇವಿ ಪ್ರಸಾದ ಅಸ್ರಣ್ಣ, ಹರಿನಾರಾಯಣದಾಸ ಅಸ್ರಣ್ಣ, ವೇದವ್ಯಾಸ ತಂತ್ರಿಗಳು ಉಪಸ್ಥಿತರಿದ್ದರು.

ಶನಿವಾರ ಬೆಳಿಗ್ಗಿನವರೆಗೆ ನಿರಂತರ ಭಜನೆ ನಡೆಯಲಿದ್ದು, ಶನಿವಾರದಿಂದ ನ.17ರವರೆಗೆ ಬೆಳಿಗ್ಗೆ 5.30ರಿಂದ ಸಂಜೆ 5.30ರವರೆಗೆ ನಾನಾ ಮಂಡಳಿಗಳಿಂದ ಭಜನೆ, ಪ್ರತಿನಿತ್ಯ 5.30ರಿಂದ 7ರ ತನಕ ಉಪನ್ಯಾಸ, 7ರಿಂದ 8 ಕಟೀಲು ಶ್ರೀದೇವಿ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದೆ.
